ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ದಿ. ಬುದ್ಧಿವಂತ ಶೆಟ್ಟರ್ ಮರೆಯಲಾಗದ ಮಹಾಚೇತನ

Lingaraj Badiger
Updated On : 22 Jan 2013, 12:45 pm

ಸುರಪುರ: ಸ್ವಾತಂತ್ರ್ಯ ಪೂರ್ವದಲ್ಲಿ ಹೈದರಾಬಾದ್ ನಿಜಾಮನ ಆಡಳಿತ ವಿರುದ್ಧ ಸೆಡ್ಡು ಹೊಡೆದು ರಂಗಂಪೇಟೆಯಲ್ಲಿ ಕನ್ನಡ ಸಾಹಿತ್ಯ ಸಂಘ ಕಟ್ಟಿ ಈ ಭಾಗದ ಜನರಿಗೆ ಕನ್ನಡ ಜಾಗೃತಿ ಮೂಡಿಸಿದ ದಿ. ಎಂ.ಆರ್. ಬುದ್ಧಿವಂತ ಶೆಟ್ಟರ್ ಕನ್ನಡ ಸಾಹಿತ್ಯ ಲೋಕ ಮರೆಯಲಾಗದ ಮಹಾ ಚೇತನ. ಅವರು ಎಂದಿಗೂ ಅಜರಾಮರ ಎಂದು ಸಣ್ಣ ಕೈಗಾರಿಕಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಾಜೂಗೌಡ ಬಣ್ಣಿಸಿದರು.
  ಸಮೀಪದ ರಂಗಂಪೇಟೆಯಲ್ಲಿ ಕನ್ನಡ ಸಾಹಿತ್ಯ ಸಂಘದ ಆವರಣದಲ್ಲಿ ಸೋಮವಾರ ದಿ. ಎಂ.ಆರ್.ಬುದ್ಧಿವಂತ ಶೆಟ್ಟರ್ ಪುತ್ಥಳಿ ಅನಾವರಣ ಹಾಗೂ ರಂಗಮಂದಿರ ಅಡಿಗಲ್ಲು ಸಮಾರಂಭ ಹಾಗೂ ಸಾಹಿತ್ಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕಿತ್ತು: ದಿ. ಶೆಟ್ಟರ್ ಅವರು ದಸರಾ ಉತ್ಸವದ ಮಾದರಿಯಲ್ಲಿ ನಾಡಹಬ್ಬ ಆಚರಣೆ ಮುಖಾಂತರ ನಾಡಿನ ಗಣ್ಯ ಸಾಹಿತಿಗಳನ್ನು ಕರೆಯಿಸಿ ಸಾಹಿತ್ಯ ರಸದೌತಣ ಉಣಬಡಿಸಿದ ಸಾಹಿತ್ಯ ದಾಸೋಹಿಯಾಗಿದ್ದರು. ದಿ.ಶೆಟ್ಟರ್‌ಗೆ ಎಂದೋ ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕಾಗಿತ್ತು. ಆದರೆ ಕೊನೆಯವರೆಗೂ ಸಿಗಲಿಲ್ಲ ಎಂಬ ನೋವು ನನಗಿದೆ. ಮುಂದೊಂದು ದಿನ ಶೆಟ್ಟರ್ ಹೆಸರಿನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಮಾಡುವ ಕಾಲ ಬರಬಹುದು ಎಂದು ಆಶಾವಾದ ವ್ಯಕ್ತಪಡಿಸಿದರು.
  ಸಮಾರಂಭದ ಸಾನ್ನಿಧ್ಯ ವಹಿಸಿದ್ದ ದೇವಪುರ ಜಡಿಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠದ ಶಿವಮೂರ್ತಿ ಶಿವಾಚಾರ್ಯರು ಆಶೀರ್ವಚನ ನೀಡಿ, ಕೆಲವರು ಸಮಾಜದಲ್ಲಿ ಇದ್ದೂ ಇಲ್ಲದಂತಿರುತ್ತಾರೆ. ಆದರೆ ಶೆಟ್ಟರ್ ಇಂದು ನಮ್ಮಿಂದ ಆಗಲಿದರೂ ಸದಾ ಅವರು ನಮ್ಮೊಂದಿಗಿದ್ದಂತಿದ್ದಾರೆ. ಸಗರನಾಡಿನ ಸಾಹಿತ್ಯ ಶ್ರೇಷ್ಠತೆಗೆ ಶೆಟ್ಟರ್ ಸ್ಥಾಪಿಸಿದ ಈ ಸಂಘದ ಕೊಡುಗೆ ಅಪಾರ. ಹಲವಾರು ಕವಿಗಳನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿದ ಕೀರ್ತಿ ಶೆಟ್ಟರ್‌ಗೆ ಸಲ್ಲುತ್ತದೆ ಎಂದರು.
ಕೃತಿ ಬಿಡುಗಡೆ: ಖ್ಯಾತ ಇತಿಹಾಸ ಸಂಶೋಧಕ ಸೀತಾರಾಮ ಜಹಗೀರದಾರ್, ಗುವಿವಿಯ ಉಪನ್ಯಾಸಕ ಡಾ. ವಿ.ಜಿ. ಪೂಜಾರ ಬರೆದ “«Û ಕಂಡಂತೆ ಬುದ್ಧಿವಂತ ËæloÁé’ ಎಂಬ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಡಾ. ಸ್ವಾಮಿರಾವ ಕುಲಕರ್ಣಿ ಶೆಟ್ಟರ್ ಕುರಿತು ಮಾತನಾಡಿದರು. ವಿಶೇಷ ಆಹ್ವಾನಿತರಾದ ಜಯಶ್ರೀ ದಂಡೆ ಅವರು ಜಯದೇವಿ ತಾಯಿ ಲಿಗಾಡೆ ಅವರು ಕುರಿತು ಮಾತನಾಡಿದರು.
  ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ, ಪುರಸಭೆ ಅಧ್ಯಕ್ಷ ಚಂದ್ರಶೇಖರ ಜಡಿಮರಳ್, ಗುಲ್ಬರ್ಗ ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರು, ಪ್ರಮುಖರಾದ ಯಲ್ಲಪ್ಪ ಕುರುಕುಂದಿ, ಸಲೀಂ ವರ್ತಿ, ಎಚ್.ಸಿ. ಪಾಟೀಲ್, ಮಹಾಂತಗೌಡ ಪಾಟೀಲ್ ವೇದಿಕೆಯಲ್ಲಿದ್ದರು.
  ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ, ಪತ್ರಕರ್ತ ಗಿರೀಶ್ ಶಾಬಾದಿ ಮತ್ತು ಸಾಹಿತಿ ಶ್ರೀನಿವಾಸ ಜಾಲವಾದಿ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ನಾಗಪ್ಪ ತ್ರೀವೇದಿ, ಮಾಣಿಕರಾವ ಬೋಡಾ, ಚಂದ್ರಕಾಂತ ಕಡೇಚೂರ್, ದತ್ತುರಾವ ಮಹೇಂದ್ರಕರ್, ಭೀಮಣ್ಣ ಅವಂಟಿ, ಜಿ.ಭೀಮಪ್ಪ ರತ್ತಾಳ, ಮಲ್ಲಪ್ಪ ಬಿಲ್ಲವ್, ಹಣಮಂತ ಚಂದನಕೇರಿ, ಸಂಗಣ್ಣ ಎಕ್ಕೆಳ್ಳಿ, ಜನಾರ್ಧನ ವಿಭೂತೆ, ಡಾ. ಎಸ್.ಎಸ್. ಪೂಜಾರಿ, ಭೀಮಾಶಂಕರ ಬಿಲ್ಲವ್, ಮಲ್ಕಪ್ಪ ತೇಲ್ಕರ್, ಲಕ್ಷ್ಮಯ್ಯ ಕಲಕೋಂಡ, ರಘುರಾಮ ಕಡಬೂರ್, ಮಂಜುನಾಥ ಗುಳಗಿ. ಪ್ರಸನ್ನ ಹೆಡಗಿನಾಳ್, ವಿರೇಶ ವಾರದ, ಸೋಮರಾಯ ಶಾಖಾಪುರ, ತಿರುಮಲರಾವ್ ಅವಂಟಿ, ಶ್ರೀರಂಗ ಮಿರಿಯಾಲ್, ಪ್ರಕಾಶ ಸಜ್ಜನ್, ಉಸ್ತಾದ ವಜಾಹತ್ ಹುಸೇನ್ ಇದ್ದರು.
  ರಂಗಂಪೇಟೆ ಕಸಾಸಂ ಅಧ್ಯಕ್ಷ ಸುರೇಶ ಸಜ್ಜನ್ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ತಾಲೂಕಾಧ್ಯಕ್ಷ ಶಾಂತಪ್ಪ ಬೂದಿಹಾಳ ಸ್ವಾಗತಿಸಿದರು. ಪ್ರಕಾಶ ಅಲಬನೂರ್ ಕಾರ್ಯಕ್ರಮ ನಿರೂಪಿದರು. ವಿರೇಶ ಗಾದಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement