ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮಹಿಳಾ ಜಾಗೃತಿ ಅಭಿಯಾನ

Lingaraj Badiger
Updated On : 22 Jan 2013, 12:34 pm

ಗುಲ್ಬರ್ಗ: ಬಾಲಕಿ ಮತ್ತು ಯುವತಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಹಿನ್ನೆಲೆಯಲ್ಲಿ 'ಸ್ತ್ರೀ ಗೌರವ ರಕ್ಷಕರು ಯಾರು' ಎಂಬ ಘೋಷಣೆಯೊಂದಿಗೆ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ವತಿಯಿಂದ ಸೋಮವಾರ ನಗರದಲ್ಲಿ ಮಹಿಳಾ ಜಾಗೃತಿ ಅಭಿಯಾನ ನಡೆಸಲಾಯಿತು.
ಬಲತ್ಕಾರಗಳಂತಹ ಘೋರ ಕೃತ್ಯಗಳನ್ನೆಸಗಿದವರಿಗೆ ಕಠಿಣ ಶಿಕ್ಷೆಯನ್ನು ಸಾರ್ವಜನಿಕವಾಗಿ ಜಾರಿಗೊಳಿಸುವ ವ್ಯವಸ್ಥೆ ಮಾಡಬೇಕು, ಕಾನೂನು ಬದ್ಧ ವೈವಾಹಿಕ ಸಂಬಂಧದಡಿಯಲ್ಲೇ ಲೈಂಗಿಕ ಬೇಡಿಕೆಗಳನ್ನು ಮಾನ್ಯ ಮಾಡಬೇಕು. ಇದರ ಹೊರತಾದ 'ಲೈವ್ ಇನ್ ರಿಲೇಷನ್‌ಶಿಪ್‌' ಸಮೇತ ಯಾವುದೇ ಸಂಬಂಧಗಳು ಕಾನೂನುಬಾಹಿರವೆಂದು ಹಾಗೂ ತಪ್ಪಿತಸ್ಥರು ಶಿಕ್ಷೆಗೊಳಗಾಗುವರು ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.
ಪೊಲೀಸ್ ವ್ಯವಸ್ಥೆಯಲ್ಲಿ ವಿಶೇಷವಾಗಿ ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆಯಲ್ಲಿ ಸುಧಾರಣೆಗಳನ್ನು ಶೀಘ್ರದಲ್ಲೇ ಜಾರಿಗೆ ತರಬೇಕು, ವಿಳಂಬವಾಗಿ ಎಫ್‌ಐಆರ್ ದಾಖಲಿಸುವುದು ಶಿಕ್ಷಾರ್ಹ ಅಪರಾಧವೆಂದು ಘೋಷಿಸಬೇಕು ಎಂದು ಆಗ್ರಹಿಸಿದರು. ಸಂಘಟನೆಗಳ ಹಲವಾರು ಮುಖಂಡರು, ಮಹಿಳೆಯರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement