ತೊಗರಿ: ಬೆಂಬಲ ಬೆಲೆ ನೀಡಲು ಸಿಎಂಗೆ ಮನವಿ
ಗುಲ್ಬರ್ಗ: ಹೈ.ಕ. ಭಾಗದ ರೈತರ ತೊಗರಿ ಪ್ರತಿ ಕ್ವಿಂಟಲ್ಗೆ ರು. 5 ಸಾವಿರ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಹೈ.ಕ. ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನಿಯೋಗ ಬೆಂಗಳೂರಿನಲ್ಲಿ ಸಿಎಂ ಜಗದೀಶ ಶೆಟ್ಟರ್ ಅವರಿಗೆ ಮನವಿ ಮಾಡಿದೆ.
ಬೇಳೆ ಕಾಳುಗಳ ಮೇಲೆ ಶೂನ್ಯ ತೆರಿಗೆ ಮುಂದುವರಿಸಬೇಕು. 12ನೇ ಹಣಕಾಸು ಯೋಜನೆಯಡಿಯಲ್ಲಿ ಕಾಫಿ ಮಂಡಳಿಗೆ ರು. 950 ಕೋಟಿ ನೀಡಿರುವ ಮಾದರಿಯಲ್ಲಿ ತೊಗರಿ ಮಂಡಳಿಗೆ, ಹೈ. ಕ. ಪ್ರದೇಶದ ರೈತರಿಗಾಗಿ, ದಾಲ್ಮಿಲ್ಗಳ ಸೂಸ್ಥಿರತೆಗಾಗಿ ಮತ್ತು ಅಭಿವೃದ್ಧಿಗಾಗಿ ರು. 1000 ಕೋಟಿ ಪ್ಯಾಕೇಜ್ ಕೇಂದ್ರ ಸರ್ಕಾರದ ವತಿಯಿಂದ ಒದಗಿಸುವ ಕುರಿತು ಶಿಫಾರಸ್ಸು ಮಾಡಬೇಕು ಎಂದು ಸಂಸ್ಥೆಯ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು. ಹೈ.ಕ. ಪ್ರದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಕಲಂ 371 (ಜೆ)ರ ಅಡಿಯಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಸಲಹೆ ಸೂಚನೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಬಸವರಾಜ ಹಡಗಿಲ್, ವೈಜನಾಥ ಪಾಟೀಲ್, ಎಸ್.ಎಸ್. ಪಾಟೀಲ್ ಕಡಗಂಚಿ, ಛಾಯಾ ದೇವಳಗಾಂವಕರ್, ಸಂಗೀತಾ ಕಟ್ಟಿಮನಿ, ಶಿವಶಂಕರ ಗಾರಂಪಳ್ಳಿ, ಜ್ಯೋತಿ ಕಾಡಾದಿ, ಎಂ.ಎಸ್. ಪಾಟೀಲ್ ನರಿಬೋಳ, ಡಾ. ಆನಂದ ಕಿತ್ತೂರ, ರಮೇಶ ನವಲೆ ಇತರರು ಉಪಸ್ಥಿತರಿದ್ದರು.