ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪೊಲೀಸ್ ವರಿಷ್ಠಾಧಿಕಾರಿ ಡಿ.ರೂಪಾಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

Lingaraj Badiger
Updated On : 23 Jan 2013, 11:44 am

ಯಾದಗಿರಿ: ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಎಸ್ಪಿಯಾಗಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡ ಡಿ.ರೂಪಾ ಮೌದ್ಗಿಲ್‌ರಿಗೆ ಮಂಗಳವಾರ ಇಲ್ಲಿಯ ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹೃದಯಸ್ಪರ್ಶಿಯಾಗಿ ಬೀಳ್ಕೊಡಲಾಯಿತು.
 ಜಿಲ್ಲಾಧಿಕಾರಿ ಜಮಾದಾರ, ಪ್ರಭಾರ ಎಸ್ಪಿ ಎಸ್.ಬಿ. ಬಿಸ್ನಳ್ಳಿ, ಡಿವೈಎಸ್ಪಿ ಕಟ್ಟಿಮನಿ ಸೇರಿ ಜಿಲ್ಲೆಯ ಎಲ್ಲ ಠಾಣೆಗಳ ಅಧಿಕಾರಿಗಳು ರೂಪಾ ಅವರನ್ನು ಸನ್ಮಾನಿಸಿ, ಆತ್ಮೀಯವಾಗಿ ಬೀಳ್ಕೊಟ್ಟರು.
ಉತ್ತಮ ಕಾರ್ಯನಿರ್ವಹಿಸಿದ ತೃಪ್ತಿ: ಈ ವೇಳೆ ಮಾತನಾಡಿದ ರೂಪಾ, ನೂತನ ಜಿಲ್ಲೆಯ ಪ್ರಥಮ ಎಸ್ಪಿಯಾಗಿ ನಾನು ಅಧಿಕಾರ ವಹಿಸಿಕೊಂಡಾಗ ಮೂಲ ಸಮಸ್ಯೆ ಸೇರಿ ಅನೇಕ ಸಮಸ್ಯೆಗಳಿದ್ದವು. ನಾನು, ಎಲ್ಲ ಸಿಬ್ಬಂದಿ ಸಮಸ್ಯೆಗಳನ್ನು ಎದುರಿಸಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿದೆವು. ಅಧಿಕಾರಿಗಳು, ಸಿಬ್ಬಂದಿ, ನಾಗರಿಕರ ಸಹಕಾರದಿಂದ ಉತ್ತಮವಾಗಿ ಕೆಲಸ ನಿರ್ವಹಿಸಿದ ತೃಪ್ತಿಯಿದೆ. ಮುಂದೆ ಬರುವ ಎಸ್ಪಿ ಅವರಿಗೂ ಇದೇ ರೀತಿ ಸಹಕಾರ ನೀಡಬೇಕೆಂದರು.
ಕೃತಜ್ಞತೆ: ಇಲಾಖೆಯಲ್ಲಿ ಅನೇಕ ಸುಧಾರಣಾ ಕ್ರಮ ಕೈಗೊಳ್ಳಲು ಪ್ರಯತ್ನಿಸಿದ್ದೇನೆ. ಸುರಪುರದಲ್ಲಿ ಡಿಎಸ್ಪಿ ಕಚೇರಿ, ಟ್ರಾಫಿಕ್ ಪೊಲೀಸ್ ಠಾಣೆ, ಮಹಿಳಾ ಪೊಲೀಸ್ ಠಾಣೆ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಿದ್ದೇನೆ. ಟ್ರಾಫಿಕ್ ಠಾಣೆ ಹಾಗೂ ಸುರಪುರದಲ್ಲಿ ಡಿಎಸ್ಪಿ ಕಚೇರಿ ಶೀಘ್ರದಲ್ಲಿ ಮಂಜೂರಾಗುವ ಸಾಧ್ಯತೆಯಿದೆ. ಸಿಎಆರ್ ವಿಭಾಗದ ಡಿಸಿಪಿಯಾಗಿ ಬಡ್ತಿ ಹೊಂದಿ ಇಲ್ಲಿಂದ ವರ್ಗಾವಣೆಯಾಗುತ್ತಿದ್ದೇನೆ. ಇದುವರೆಗೆ ಸಹಕಾರ ನೀಡಿದ ಜಿಲ್ಲೆಯ ಜನರಿಗೆ, ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಡಿಸಿ ಹಾರೈಕೆ: ಡಿಸಿ ಜಮಾದಾರ ಮಾತನಾಡಿ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಎರಡು ಕಣ್ಣು ಇದ್ದಂತೆ. ಪರಸ್ಪರ ಸಹಕಾರದಿಂದ ಕೆಲಸ ಮಾಡಿದಾಗ ನೆಮ್ಮದಿಯಿಂದ ಬದುಕಲು ಸಾಧ್ಯ. ಶಾಂತಿ ಸುವ್ಯವಸ್ಥೆ ಕಾಪಾಡಲು ಶ್ರಮಿಸಿ ವರ್ಗಾವಣೆಯಾದ ರೂಪಾ ಅವರಿಗೆ ಮುಂದಿನ ವೃತ್ತಿ ಜೀವನ ಸುಖಮಯವಾಗಿರಲಿ ಎಂದು ಶುಭ ಕೋರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement