ನಗರದಲ್ಲಿ ಅದ್ಧೂರಿ ಈದ್ ಮಿಲಾದ್
ಗುಲ್ಬರ್ಗ: ಇಲ್ಲಿನ ಮುಸ್ಲಿಂರು ಶುಕ್ರವಾರ ಈದ್ ಮಿಲಾದ್ ಆಚರಿಸಿ ಅಲ್ಲಾ ಸ್ಮರಣೆ ಮಾಡಿದರು. ಈ ಹಬ್ಬದ ನಿಮಿತ್ತ ನಗರದ ಮುಸ್ಲಿಂ ಚೌಕ್ನಲ್ಲಿ ನಡೆದ ಮಿಲಾದುನ್ನದಿ ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ತರಹೇವಾರಿ ಪ್ರಾತ್ಯಕ್ಷಿಕೆಗಳೊಂದಿಗೆ ಮೆರವಣಿಗೆ ಶಿಸ್ತುಬದ್ಧವಾಗಿ ನಡೆಯಿತು. ಮುಸ್ಲಿಂ ಚೌಕ್ನಲ್ಲಿ ನಗರದ ಎಲ್ಲಾ ರ್ಯಾಲಿಗಳು ಬಂದು ಸೇರುತ್ತವೆ. ಇಲ್ಲಿ ಉಪಸ್ಥಿತರಿದ್ದ ಶಾಸಕ ಖಮರುಲ್ ಇಸ್ಲಾಂ ಹಸಿರು ನಿಶಾನೆ ತೋರಿಸುವ ಮೂಲಕ ಪ್ರಾತ್ಯಕ್ಷಿಕೆಗಳ ಮೆರವಣಿಗೆಗೆ ಚಾಲನೆ ನೀಡಿದರು. ಇಲ್ಲಿಂದ ಮೆರವಣಿಗೆ ಚೌಕ್ ಠಾಣೆ ಮುಂಭಾಗದ ಆವರಣದಲ್ಲಿ ಸೇರಿತು. ಸರ್ವ ಜನ ಸಮುದಾಯದವರು ಬಂದು ಸಭೆ, ಸನ್ಮಾನಗಳು ನಡೆದವು. ರಾತ್ರಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ದೇಶ-ವಿದೇಶಗಳಿಂದ ಗುಲ್ಬರ್ಗಕ್ಕೆ ಆಗಮಿಸಿರುವ ತಜ್ಞರಿಂದ ಉಪನ್ಯಾಸ ನಡೆಯುತ್ತವೆ.