ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

31ರಂದು ಅಂಬಿಗರ ಚೌಡಯ್ಯ ಜಯಂತ್ಯುತ್ಸವ

Lingaraj Badiger
Updated On : 28 Jan 2013, 11:32 am

ಜೇವರ್ಗಿ: ತಾಲೂಕಿನ ಕೋಲಿ ಸಮಾಜದ ವತಿಯಿಂದ ಜ. 31ರಂದು ಗುರುವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಪಂ ಸದಸ್ಯೆ ಶೋಭಾ ಶಂಕರ ಬಾಣಿ ತಿಳಿಸಿದ್ದಾರೆ. ಅವರು ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಚೌಡಯ್ಯನವರ ಜಯಂತಿ ಆಚರಣೆಗೆ ಆದೇಶ ನೀಡಿದ್ದು ಸ್ವಾಗತಾರ್ಹ. ಸಮಾಜದಲ್ಲಿ ಸಂಘಟನೆ ಹಾಗೂ ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
 ತಾಲೂಕು ಸೇರಿದಂತೆ ಜಿಲ್ಲೆ  ವಿವಿಧ ಭಾಗಗಳಿಂದ ಸುಮಾರು 15 ಸಾವಿರಕ್ಕಿಂತ ಅಧಿಕ ಜನ ಸೇರಲಿದ್ದಾರೆ. ಮಾಜಿ ಮುಖ್ಯ ಸಚೇತಕ ವಿಠ್ಠಲ್ ಹೇರೂರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮೈಸೂರಿನ ಉರಿಲಿಂಗ ಪೆದ್ದಿ ಸಂಸ್ಥಾನ ಮಠದ ಶ್ರೀಜ್ಞಾನಪ್ರಕಾಶ ಸ್ವಾಮಿ ಹಾಗೂ ತೊನಸನಳ್ಳಿ ಅಲ್ಲಂಪ್ರಭು ಪೀಠದ ಮಲ್ಲಣಪ್ಪ ಮಹಾಸ್ವಾಮಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.
ಮೆರವಣಿಗೆ: ಪಪಂ ಅಧ್ಯಕ್ಷೆ ಬಾಯಮ್ಮ ತಳವಾರ ಚೌಡಯ್ಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಿದ್ದು, ಸ್ತಬ್ಧಚಿತ್ರದ ಮೆರವಣಿಗೆಯಲ್ಲಿ ಅಹಿಂಸಾ ವಾದಿಗಳಾದ ಮಾತಾ ಮಾಣಿಕಾದೇವಿ, ಅಗಸ್ತ್ಯ ಮುನಿಗಳು, ಹಂಚಿನಾಳದ ಶರಣರು ಸೇರಿದಂತೆ ಅನೇಕ ಶರಣರ ಭಾವಚಿತ್ರದ ಮೆರವಣಿಗೆ ನಡೆಯಲಿದ್ದು, ಉದ್ದಿಮೆದಾರ ಧತ್ತರಾಜ ಕಿನ್ನೂರ ಮೆರವಣಿಗೆಗೆ ಚಾಲನೆ ನೀಡುವರು.
 ಉಪನ್ಯಾಸಕಿ ಡಾ. ಮೀನಾಕ್ಷಿ ಬಾಳಿ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಜೆಡಿಎಸ್ ಮುಖಂಡ ಬಸವರಾಜ ಬೂದಿಹಾಳ, ನೀಲಕಂಠ ಜಮಾದಾರ, ಗುಲ್ಬರ್ಗ ಅಂಬಿಗರ ಚೌಡಯ್ಯ ಟ್ರಸ್ಟನ ಅಧ್ಯಕ್ಷ ಶಿವಶರಣಪ್ಪ ಜಂಬೇರಾಳ, ಶಿವಪುತ್ರಪ್ಪ ಕೋಣಿನ್, ಶಂಕರ ಕಟ್ಟಿಸಂಗಾವಿ, ಮಲ್ಲಿಕಾರ್ಜುನ ಆಲೂರ್, ಭೀಮಣ್ಣ ಸಾಲಿ, ಬಾಬುರಾವ ಜಮಾದಾರ, ಪುಂಡಲಿಕ ಗಾಯಕವಾಡ, ಬೈಲಪ್ಪ ನೆಲೋಗಿ, ಬಿ. ಬಸಣ್ಣ, ಭೂತಾಳಿ ದಾವಜಿ ಆಗಮಿಸಲಿದ್ದಾರೆ. ಡಾ. ವಿಠ್ಠಲ್ ದೊಡ್ಡಮನಿ, ಬಸವಣ್ಣಪ್ಪ ಗೌನಳ್ಳಿ, ನಾಟಕಕಾರ ಎಲ್.ಬಿ.ಕೆ. ಆಲ್ದಾಳ, ಡಾ.ಸಿದ್ದು ಪಾಟೀಲ್, ಸಾಯಬಣ್ಣ ತಳವಾರ, ಕಂಠೆಪ್ಪ ತಳವಾರ ಅವರನ್ನು ಸನ್ಮಾನಿಸಲಾಗುವುದು ಎಂದರು.
ಪ್ರತ್ಯೇಕ ನಿಗಮ ಸ್ಥಾಪಿಸಿ: ಕಳೆದ ಮೂರು ದಶಕಗಳಿಂದ ಕೋಲಿ ಸಮಾಜವನ್ನು ಎಸ್‌ಟಿ ಪಂಗಡಕ್ಕೆ ಸೇರಿಸಬೇಕೆಂದು ಹೋರಾಟ ಮಾಡುತ್ತಾ ಬರಲಾಗುತ್ತಿದೆ. ರಾಜ್ಯದಲ್ಲಿ ಶೇ. 30ರಷ್ಟು ಜನಸಂಖ್ಯೆಯಿರುವ  ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದಿದ್ದು, 36 ಪರ್ಯಾಯ ಪದಗಳಿಂದ  ಗುರುತಿಸಲ್ಪಡುತ್ತಿದೆ. ಇದರಿಂದ ರಾಜಕೀಯವಾಗಿ ಸ್ಥಾನಮಾನ ಪಡೆಯುವಲ್ಲಿ ವಿಫಲರಾಗುತ್ತಿದ್ದೇವೆ. ಕೂಡಲೇ ಈ ಸಮಾಜವನ್ನು ಎಸ್‌ಟಿ ಪಂಗಡಕ್ಕೆ ಸೇರಿಸಬೇಕು. ಹಿಂದುಳಿದ ವರ್ಗದವರ ನಿಗಮ ಸ್ಥಾಪಿಸಿ ಅದರಲ್ಲಿ ನೂರಾರು ಜಾತಿಗಳನ್ನು ಸೇರಿಸಿ ಬಜೆಟ್‌ನಲ್ಲಿ ಸಾವಿರ ಕೋಟಿ ರು. ಮೀಸಲಿರಿಸಬೇಕು ಎಂದು ಒತ್ತಾಯಿಸಿದರು.  ಸುದ್ದಿಗೋಷ್ಠಿಯಲ್ಲಿ ತಾಲೂಕು ಕೋಲಿ ಸಮಾಜದ ಅಧ್ಯಕ್ಷ ಶಿವಶರಣಪ್ಪ ಹೊನ್ನಾಳ, ಮನೋಹರ ಕಾಮನಕೇರಿ, ಬಸವರಾಜ ಹರವಾಳ, ಆನಂದ ಶಾಬಾದಿ, ಹಲಕಟ್ಟೆಪ್ಪ ತಳವಾರ, ವೆಂಕಟೇಶ ಬಿರಾಳ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement