ಕಾನೂನಿನ ಅರಿವು ಎಲ್ಲರಲ್ಲಿ ಬರಲಿ: ಪರಮೇಶ್ವರ
ಸೇಡಂ: ಜೀವನವನ್ನು ಉತ್ತಮವಾಗಿಸಲು ಕಾನೂನಿನ ಅರಿವು ಪ್ರತಿಯೊಬ್ಬರಲ್ಲೂ ಅತ್ಯವಶ್ಯಕ ಎಂದು ಗುಲ್ಬರ್ಗ ಪ್ರಜಾ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಪರಮೇಶ್ವರ ಹೇಳಿದರು.
ಸ್ಥಳೀಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪುರಸಭೆ ಕಾರ್ಯಾಲಯ ಸೇಡಂ ಹಾಗೂ ಪ್ರಜಾ ಅಭಿವೃದ್ಧಿ ಸಂಸ್ಥೆ ಗುಲ್ಬರ್ಗ ಸಂಯುಕ್ತಾಶ್ರಯದಲ್ಲಿ ನಡೆದ ಪುರಸಭೆ ಸದಸ್ಯರು ಸಿಬ್ಬಂದಿಗೆ ಕಾನೂನು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಅನಂತಯ್ಯ ಮುಸ್ತಾಜರ ಮಾತನಾಡಿ, ಕಾನೂನು ಸೇವಾ ಸಮಿತಿಯಿಂದ ಹಲವಾರು ಸೌಲಭ್ಯಗಳು ಇದ್ದು, ಅವುಗಳ ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ವಿ. ತುರಮರಿ ಉದ್ಘಾಟಿಸಿದರು. ತಹಸೀಲ್ದಾರ್ ಪ್ರಕಾಶ ಬಿ. ಕುದುರೆ ಸಕಾಲ ಯೋಜನೆಯ ಮಾಹಿತಿ ನೀಡಿದರು. ವೈದ್ಯಾಧಿಕಾರಿ ರೂಪಾ ಐರೆಡ್ಡಿ ಸಾರ್ವಜನಿಕರ ಆರೋಗ್ಯ ಮತ್ತು ಶುಚಿತ್ವದಲ್ಲಿ ಪೌರ ಕಾರ್ಮಿಕರ ಪಾತ್ರ ಕುರಿತು ತಿಳಿಸಿದರು. ಕಿರಿಯ ಸಿವಿಲ್ ನ್ಯಾಯಾಧೀಶೆ ನಾಗಮ್ಮ ಇಚ್ಚಂಗಿ, ಮುಖ್ಯಾಧಿಕಾರಿ ಬಸವರಾಜ ಶಿವಪೂಜಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಸಿ.ವಿ. ರಾಮನ್, ನ್ಯಾಯವಾದಿ ಆರ್. ನಾರಾಯಣರೆಡ್ಡಿ, ಶಂಕ್ರಮ್ಮ ಶೆಟ್ಟಿ ಹೂಡಾ, ದೇವಿಬಾಯಿ, ಶರಣಪ್ಪ ಮೆಕ್ಯಾನಿಕ್, ಶಕುಂತಲಾ ಪಂಚಾಳ, ಮಲ್ಲಿಕಾರ್ಜುನ ಗುಡ್ಡದ್ ಉಪಸ್ಥಿತರಿದ್ದರು. ಸೌಭಾಗ್ಯಲಕ್ಷ್ಮೀ ಸ್ವಾಗತಿಸಿದರು. ಸವಿತಾ ಪೂಜಾರಿ ನಿರೂಪಿಸಿದರು. ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ನಾಗೇಶ ಮಿಟ್ಟಿ ವಂದಿಸಿದರು.