'ಕೆಜೆಪಿಗೆ 60 ಸಾವಿರಕ್ಕೂ ಹೆಚ್ಚು ಸದಸ್ಯರು'
ಗುಲ್ಬರ್ಗ: ನಗರದ ಉತ್ತರ ವಿಧಾನಸಭಾ ವ್ಯಾಪ್ತಿಯಲ್ಲಿ ಬರುವ ಗಂಜ್ ಪ್ರದೇಶ ಹಾಗೂ ರೋಜಾ ಬಡಾವಣೆಯಲ್ಲಿ ಕೆಜೆಪಿ ಸಾರ್ವಜನಿಕ ಸದಸ್ಯತ್ವ ಅಭಿಯಾನಕ್ಕೆ ನಾಸಿರ್ ಹುಸೇನ್ ಉಸ್ತಾದ್ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ತಿಪ್ಪಣ್ಣಪ್ಪ ಕಮಕನೂರ್, ಜಿಲ್ಲೆಯಲ್ಲಿ ಕೆಜೆಪಿ ಗಟ್ಟಿಗೊಳಿಸಲು ಮತ್ತು ಯಡಿಯೂರಪ್ಪ ಅವರ ಕೈ ಬಲ ಪಡಿಸಲು ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಸದಸ್ಯತ್ವ ಪಡೆಯುತ್ತಿರುವುದು ಹರ್ಷದ ಸಂಗತಿ. ಜಿಲ್ಲೆಯಲ್ಲಿ ಈ ವರೆಗೆ 60 ಸಾವಿರಕ್ಕೂ ಹೆಚ್ಚು ಜನ ಸದಸ್ಯತ್ವ ಪಡೆದಿದ್ದಾರೆ ಎಂದು ಹೇಳಿದರು.
ಉತ್ತರ ಮತ ಕ್ಷೇತ್ರದಲ್ಲಿ ಅತಿ ಹೆಚ್ಚು ಜನ ಸದಸ್ಯರಾಗುವ ಮೂಲಕ ಅಭ್ಯರ್ಥಿ ನಾಸಿರ್ ಹುಸೇನ್ ಉಸ್ತಾದ್ ಅವರಿಗೆ ಬೆಂಬಲಿಸಿ ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕರೆ ನೀಡಿದರು.
ನಗರ ಸಂಚಾಲಕ ಅಮರನಾಥ ತಡಕಲ್ ಮಹಾಗಾಂವ, ಜಿಲ್ಲಾ ಸಂಚಾಲಕ ಬಸವರಾಜ ಇಂಗಿನ್, ಸಹ ಸಂಚಾಲಕ ಸೂರ್ಯಕಾಂತ ನಿಂಬಾಳಕರ್, ವಿಭಾಗೀಯ ಕಾರ್ಯದರ್ಶಿ ಸುಭಾಷ ಬಿರಾದಾರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಸತೀಶ ಗುತ್ತೇದಾರ, ಶಿವಕುಮಾರ್ ಗಂಗಸಿರಿ, ರವಿ ಬಿರಾದಾರ, ಅಜಂ ಪಟೇಲ್, ಖಾಜಾ ನಿಂಬಾಳಕರ್, ಪಾಲಿಕೆ ಸದಸ್ಯರಾದ ಫೈಸಲ್, ವರದಾಶಂಕರ ಶೆಟ್ಟಿ, ಮುಖಂಡರಾದ ಅನ್ವರ್ ಖಾನ್, ಶೇಖ್ ಅಹ್ಮದ್, ಮಹ್ಮದ್ ಹನೀಫ, ಅಶೋಕ ಮಾನ್ಕರ್, ಗಂಗಾಧರ ಬಿಲಗುಂದಿ, ಮಹೇಶ ಪಟ್ಟಣ, ಬಾಬು, ಮುನ್ನಾ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.