ಸ್ನೇಹ ಸಮ್ಮೇಳನದಲ್ಲಿ ಪ್ರತಿಭೆ ಅನಾವರಣ
ಗುಲ್ಬರ್ಗ: ಚಿತ್ತಾಪುರ ತಾಲೂಕಿನ ರೇವಗ್ಗಿ ಬೆಟ್ಟದ ಮೇಲಿರುವ ಮೊರಾರ್ಜಿ ವಸತಿ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಶನಿವಾರ ನಡೆಯಿತು.
ಎಸ್ಸೆಸ್ಸೆಲ್ಸಿ ಫಲಿತಾಂಶದಿಂದ ಹಿಡಿದು ವೈಯಕ್ತಿಕ ವಿಷಯವಾರು ಮಕ್ಕಳ ಸಾಧನೆಯಾಗಲಿ, ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲೂ ಇಲ್ಲಿನ ಮಕ್ಕಳು ಯಾವುದರಲ್ಲಿಯೂ ಕಮ್ಮಿ ಇಲ್ಲ ಎಂಬ ಸಂದೇಶ ಸ್ನೇಹ ಸಮ್ಮೇಳನದಲ್ಲಿ ತೋರಿಸಿಕೊಟ್ಟರು.
2 ಲಕ್ಷ ಘೋಷಣೆ: ಅರಣಕಲ್ ಜಿಪಂ ಸದಸ್ಯೆ ಕಮಲಾಬಾಯಿ ಪಾಟೀಲ್ ಮಕ್ಕಳಿಗೆ ಪುರಸ್ಕಾರ ನೀಡಿ ಮಾತನಾಡಿ, ತಮ್ಮ ಅನುದಾನದಲ್ಲಿ ಶಾಲೆಯ ಕ್ಯಾಂಪಸ್ಸಿಗೆ ನೀರಿನ ಅನುಕೂಲ ಕಲ್ಪಿಸಲು 2 ಲಕ್ಷ ಘೋಷಿಸಿದರು. ಮುಖಂಡ ಬಸವರಾಜ ಪಾಟೀಲ್ ಮಾತನಾಡಿ, ಪ್ರಾಚಾರ್ಯ ಮಲ್ಲಿಕಾರ್ಜುನ ಬಿರಾದಾರ ಹಾಗೂ ಶಿಕ್ಷಕರ ತಂಡದ ಶ್ರಮ ಇತರರಿಗೂ ಮಾದರಿಯಾಗಲಿ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಕೆ.ಟಿ. ರಾಠೋಡ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಹೆಬೂಬ್ ಪಾಶಾ ಕಾರಟಗಿ ಮಾತನಾಡಿದರು.
ಕಾಳಗಿ ಜಿಪಂ ಎಂಜಿನಿಯರಿಂಗ್ ಉಪ ವಿಭಾಗದ ಎಇಇ ಹಣ್ಮಂತರೆಡ್ಡಿ, ಅರಣಕಲ್ ತಾಪಂ ಸದಸ್ಯೆ ಅಂಬಿಕಾ ಹಣ್ಮಂತರಾಯ ಶೀಲವಂತ, ಕಂದಗೂಳ ಗ್ರಾಪಂ ಸದಸ್ಯ ಅಜೀಂ ಹೊಸಳ್ಳಿ, ಪಾಲಕರ ಪರಿಷತ್ತಿನ ಪ್ರತಿನಿಧಿ ಶಂಕರ ಸುತಾರ್, ಹೆಬ್ಬಾಳ ಎಂಡಿಆರ್ಎಸ್ನ ಶರಣಬಸಪ್ಪ ಪಾಟೀಲ್, ಶಿಕ್ಷಕರಾದ ಅಣವೀರ ಹರಸೂರ್, ಆರೀಫ್ ಮೊಹ್ಮದ್, ನಿವೃತ್ತ ಬಿಇಒ ಐ.ಕೆ. ಮ್ಯಾಕೇರಿ, ಮಾಡಬೂಳದ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ ಶಿಕ್ಷಕ ಸಿದ್ರಾಮಯ್ಯ ಹಿರೇಮಠ, ಗುಂಡಗುರ್ತಿ ಎಂಡಿಆರ್ಎಸ್ನ ಶಿವಾನಂದ, ಶಾಲೆಯ ವಿದ್ಯಾರ್ಥಿ, ಮಕ್ಕಳ ಪರಿಷತ್ ಮುಖಂಡ ರಾಹುಲ್ ಇದ್ದರು.
ಪ್ರಾಚಾರ್ಯ ಬಿರಾದಾರ ಸ್ವಾಗತಿಸಿದರು. ಕನ್ನಡ ಶಿಕ್ಷಕ ವಿಜಯ ಅಣಕಲ್ ವರದಿ ವಾಚಿಸಿದರು. ಸಹ ಶಿಕ್ಷಕರಾದ ದತ್ತು, ಜಬನೀತ್ ಬೇಗಂ ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕರಾದ ಮಹಾದೇವ ತಳವಾರ, ಚರಪಳ್ಳಿ, ಅಶೋಕ, ಆರೋಗ್ಯ ಸಹಾಯಕರಾದ ವಿನೋದ ಗಾಳದ, ತ್ರಿವಿಕ್ರಮ ಸೇರಿದಂತೆ ಶಿಕ್ಷಕರೆಲ್ಲರೂ ವಿವಿಧ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಸ್ನೇಹ ಮಿಲನವನ್ನು ಯಶಸ್ವಿಗೊಳಿಸಿದರು.
--