ಆರೋಗ್ಯ- ಕೃಷಿ ಕ್ಷೇತ್ರಗಳಿಗೆ ಆದ್ಯತೆ: ಸಚಿವ ಖರ್ಗೆ
ಜೇವರ್ಗಿ: ಕೇಂದ್ರ ಸರ್ಕಾರ ಪ್ರಸಕ್ತ ವರ್ಷ ಆರೋಗ್ಯ ವಿಮೆಗೆ 2 ಸಾವಿರ ಕೋಟಿ ಅನುದಾನ ಬಿಡುಗಡೆಗೊಳಿಸಿ ಆರೋಗ್ಯ ಮತ್ತು ಕೃಷಿ, ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಪದವಿ ಮಹಾವಿದ್ಯಾಲಯ ಆವರಣದಲ್ಲಿ ಆಯೋಜಿಸಲಾಗಿದ್ದ ಧರ್ಮಸಿಂಗ್ ಫೌಂಡೇಷನ್ ಜೇವರ್ಗಿ ಹಾಗೂ ನಾರಾಯಣ ಹೃದಯಾಲಯ ಬೆಂಗಳೂರು ಮತ್ತು ಬಸವೇಶ್ವರ ಸಾರ್ವಜನಿಕ ಆಸ್ಪತ್ರೆ ಗುಲ್ಬರ್ಗ ಇವರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಸ್ತ್ರ ಚಿಕಿತ್ಸೆ: ಆರೋಗ್ಯ ಪೂರ್ಣ ಜೀವನದಿಂದ ಬದುಕಿನಲ್ಲಿ ನೆಮ್ಮದಿ ಕಾಣಬಹುದು, ಈ ಶಿಬಿರದಲ್ಲಿ ತಜ್ಞ ವೈದ್ಯರು ಬಡರೋಗಿಗಳಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಅವಶ್ಯಕ ಅನಿಸಿದರೆ ಶಸ್ತ್ರ ಚಿಕಿತ್ಸೆ ನಡೆಸಿಲಿದ್ದಾರೆ. ಈಗಾಗಲೇ ಜೇವರ್ಗಿ ಜನತೆಗೆ ಉಚಿತ ತುರ್ತು ವಾಹನಗಳ ಧರ್ಮಸಿಂಗ್ ಫೌಂಡೇಷನ್ ಸೇವೆ ನೀಡುತ್ತಿದೆ ಎಂದರು.
2005ರಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ನಡೆಸಿ ಸಾವಿರಾರು ಜನರಿಗೆ ವಿವಿಧ ಹಂತದ ಶಸ್ತ್ರ ಚಿಕಿತ್ಸೆಗಳನ್ನು ಸಹ ಧರ್ಮಸಿಂಗ್ ಫೌಂಡೇಷನ್ನಿಂದ ನಿರ್ವಹಿಸಲಾಗಿದೆ.
ಉಚಿತ ಆರೋಗ್ಯ ತಪಾಸಣೆ ಮಾಡುವುದು ಸರಳವಾಗಿರುಬಹುದು ಆದರೆ ರೋಗಿಗಳ ಕಾಳಜಿ ವಹಿಸಿ ಅವರಿಗೆ ಯಾವ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ದೊರೆಯುತ್ತದೆ ಎಂಬುವುದನ್ನು ತಿಳಿದುಕೊಂಡು, ಅಂತಹ ರೋಗಿಗಳನ್ನು ಅವರ ಕುಟುಂಬದ ವರ್ಗದವರಿಗೆ ಕರೆದುಕೊಂಡು ಹೋಗಿ ಮನೆಗೆ ಮುಟಿಸುವುದು ಕಷ್ಟದ ಕೆಲಸವಾಗಿದೆ ಎಂದರು.
ಶ್ಲಾಘನೀಯ: ಶಿಬಿರದಲ್ಲಿ ಜ್ಯೋತಿ ಬೆಳಗಿಸಿದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವೀರಣ್ಣ ಮತ್ತಿಕಟ್ಟಿ ಮಾತನಾಡಿ, ಉಚಿತ ಆರೋಗ್ಯ ತಪಾಸಣೆ ಶಿಬಿರ ಮಾನವೀಯ ಮೌಲ್ಯಗಳ ಪ್ರತಿಕ ಧರ್ಮಸಿಂಗ್ ಫೌಂಡೇಷನ್ ವತಿಯಿಂದ ತಾಲೂಕಿನ ಬಡ ಜನರಿಗೆ ನಿರಂತರವಾಗಿ ಉಚಿತ ಅಂಬುಲೆನ್ಸ್ ಸೇವೆ ಮತ್ತು ಆರೋಗ್ಯ ಶಿಬಿರದಂತಹ ಸಾಮಾಜಿಕ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ, ಶಾಸಕರಾದ ಡಾ. ಶರಣಪ್ರಕಾಶ ಪಾಟೀಲ್, ಖಮರುಲ್ ಇಸ್ಲಾಂ, ಮಾಲೀಕಯ್ಯ ಗುತ್ತೇದಾರ, ಫೌಂಡೇಷನ್ ಅಧ್ಯಕ್ಷ ಡಾ. ಅಜಯಸಿಂಗ್, ಶಾಂತಗೌಡ ದುಮದ್ರಿ, ಅಮೃತಗೌಡ ಪಾಟೀಲ್, ಸಿದ್ರಾಮಪ್ಪಗೌಡ ಪಾಟೀಲ್, ಚಂದ್ರಶೇಖರ ಹರನಾಳ, ಶರಣಗೌಡ ಹರನೂರ, ಶಿವಶರಣಪ್ಪ ಕೋಬಾಳ, ಕಾಶಿರಾಯಗೌಡ ಯಲಗೋಡ, ಶಿವಪುತ್ರಪ್ಪ ಕೋರಿ, ಗುರುಲಿಂಗಪ್ಪಗೌಡ ಪಾಟೀಲ್, ಗಿರೇಪ್ಪಗೌಡ ಪಾಟೀಲ್, ವಿಜಯಕುಮಾರ್ ಪಾಟೀಲ್, ನೀಲಕಂಠ ಕಟ್ಟಿಸಂಗಾವಿ, ಸುಧೀಂದ್ರ ವಕೀಲ, ಸಲ್ಲಿಂ ಕಣ್ಣಿ, ಮಹಿಮೂದ್ ನೂರಿ, ಶ್ರೀಮಂತ ಧನ್ನಕರ್, ಫಯಾಜ್ ಜಮಾದಾರ, ಮರೇಪ್ಪ ಸರಡಗಿ, ರವಿ ಕೋಳಕುರ್, ಅಂಬರೀಶ ಪತಂಗೆ, ಸಚಿನ ಸಾವಜಿ, ಎಂ.ಡಿ. ಹನೀಫ್ ಪಾಲ್ಗೊಂಡಿದ್ದರು.
ಗದಗನ ಡಂಬಳ ಮಠದ ಪೀಠಾಧಿಪತಿ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ: ವೈದ್ಯಕೀಯ ವೃತ್ತಿಯಲ್ಲಿ ವಿಶಿಷ್ಠ ಸೇವೆಸಲ್ಲಿಸಿದ ಡಾ. ಎಸ್.ಎಸ್. ಪಾಟೀಲ್, ಡಾ. ವಿಜಯಲಕ್ಷ್ಮೀ ದೇಶಮಾನೆ, ಡಾ. ಶಂಕರಗೌಡ ಮಾಲಿಪಾಟೀಲ್, ಡಾ.ಎಸ್.ಬಿ. ಪಾಟೀಲ್ ದುಮದ್ರಿ, ಡಾ.ಎಸ್.ಆರ್. ಹರವಾಳ, ಡಾ. ಶಿವಾನಂದ ಪಾಟೀಲ್ ಗಂವ್ಹಾರ, ಡಾ. ಕೆ.ಜಿ. ಬಿರಾದಾರ, ಡಾ.ವೀರಣ್ಣ ವಾಲಿಕಾರ್, ಡಾ.ಎನ್.ಎಸ್. ಪಾಟೀಲ್ ಕಲ್ಲೂರ, ಡಾ. ಬಿ.ಬಿ. ಬಿಲ್ವಾರ, ಡಾ.ಎಸ್.ಎಸ್. ದೇವರಮನಿ, ಡಾ.ಸಿದ್ದು ಪಾಟೀಲ್, ಡಾ. ಬಸವರಾಜ ಗುಳಗಿ, ಡಾ. ಉಮೇಶ ಶರ್ಮಾ ಸನ್ಮಾನಿಸಿ ಗೌರವಿಸಲಾಯಿತು.
ಬೆಂಗಳೂರಿನಿಂದ ಬಂದ ವೈದ್ಯರು: ಸೋಮವಾರ ನಡೆದ ಉಚಿತ ಆರೋಗ್ಯ ಶಿಬಿರದಲ್ಲಿ 7500 ರೋಗಿಗಳು ದಾಲಲಾತಿ ಪಡೆದು ಚಿಕಿತ್ಸೆ ಪಡೆದರು.
ಬೆಂಗಳೂರಿನಿಂದ 30ಜನ ವೈದ್ಯರ ತಂಡ ಆಗಮಿಸಿತ್ತು. ಅದರಲ್ಲಿ ಡಾ. ಕಾಮೇಶ್ವರಿದೇವಿ ಸೈಂಟಿಷ್ಟ್ 800 ಕ್ಯಾನ್ಸರ್ ರೋಗಿಗಳ ತಪಾಸಣೆ ನಡೆಸಿದರು.
ಡಾ. ರವಿಶಂಕರ ಶೆಟ್ಟಿ ಹೃದ್ರೋಗ ತಜ್ಞರು ರೋಗಿಗಳ ತಪಾಸಣೆ ನಡೆಸಿದರು. 7ಸಾವಿರ ಸ್ತ್ರೀ ರೋಗಿಗಳ ದಾಖಲಾತಿಯಾಗಿದ್ದು, ಅದರಲ್ಲಿ 2500 ಸ್ತ್ರಿ ರೋಗಿಗಳ ತಪಾಸಣೆ ನಡೆಸಿದ್ದಾರೆ.