ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ
ಗುಲ್ಬರ್ಗ: ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ- ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ದ್ವಿತೀಯ ವರ್ಷ ಓದುತ್ತಿರುವ ವಿದ್ಯಾರ್ಥಿಗಳಿಗೆ ಬೀಳ್ಕೊಡಗೆ ಸಮಾರಂಭ ಏರ್ಪಡಿಸಲಾಯಿತು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಗಣಪತಿ ಸಿನ್ನೂರ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶ್ರೇಷ್ಠವಾದ ಕನಸು ಕಾಣಬೇಕು. ಅದನ್ನು ನನಸು ಮಾಡಲು ಶ್ರದ್ಧೆ- ಭಕ್ತಿಯಿಂದ ಪ್ರಾಮಾಣಿಕ ಪ್ರಯತ್ನ ಪಡಬೇಕು ಎಂದರು.
ಸಂಶೋಧನಾತ್ಮಕ ದೃಷ್ಟಿಕೋನ ಬೆಳೆಸಿಕೊಂಡು ಭವಿಷ್ಯದ ಶ್ರೇಷ್ಠ ಜವಾಬ್ದಾರಿಗಳನ್ನು ನಿಭಾಯಿಸಲು ಸಿದ್ಧರಾಗಬೇಕು. ತಂದೆ-ತಾಯಿ ಹಾಗೂ ದೇಶಸೇವೆಗಾಗಿ ಜೀವನ ಅರ್ಪಿಸಬೇಕೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಶೈಲ್ ಹೊಗಾಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಮತ್ತು ರಾಷ್ಟ್ರಮಟ್ಟದ ಪರೀಕ್ಷೆಗಳಲ್ಲಿ ಅತಿಹೆಚ್ಚಿನ ಅಂಕಗಳನ್ನು ಗಳಿಸಿ ಸಂಸ್ಥೆಯ ಕೀರ್ತಿಗೆ ಪಾತ್ರರಾಗಬೇಕೆಂದರು.
2012-13ನೇ ಶೈಕ್ಷಣಿಕ ವರ್ಷದ (ಪಿಯುಸಿ ದ್ವಿತೀಯ) ಉತ್ತಮ ವಿದ್ಯಾರ್ಥಿಗಳೆಂದು ಆಯ್ಕೆಮಾಡಿ ಕುಮಾರಿ ಪಾಯಲ್ ಮಂತ್ರಿ ಮತ್ತು ಕುಮಾರ ಅಮೂಲ ಎಂ. ಹಲಮಂಡಗೆ ಅವರಿಗೆ ಮುಖ್ಯ ಅತಿಥಿಗಳು ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಿ ಪ್ರೋತ್ಸಾಹಿಸಿದರು.