ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶ್ವಾನದಳ ಇಲ್ಲದ ಏಕೈಕ ಜಿಲ್ಲೆ ಯಾದಗಿರಿ

Parashurama
Updated On : 29 Jan 2013, 1:33 am

ಯಾದಗಿರಿ: ಜಿಲ್ಲೆಯಾಗಿ ರೂಪುಗೊಂಡು ಮೂರು ವರ್ಷಗಳಾದರೂ ಜಿಲ್ಲಾ ಪೊಲೀಸ್ ಮಾತ್ರ ಇಲ್ಲಗಳ ದೊಡ್ಡ ಪಟ್ಟಿಯನ್ನೇ ಹಿಡಿದಿದೆ. ಅಪರಾಧ ಪ್ರಕರಣಗಳ ಶೀಘ್ರ ಪತ್ತೆಗೆ ಅಗತ್ಯವಿರುವ ಶ್ವಾನದಳ ಇಲ್ಲದ ರಾಜ್ಯದ ಏಕೈಕ ಜಿಲ್ಲೆ ಇದು. ಮಹಿಳಾ ಠಾಣೆ, ಟ್ರಾಫಿಕ್ ಠಾಣೆಯೂ ಇಲ್ಲದ್ದರಿಂದ ಪೊಲೀಸರ ಜತೆ ಸಾರ್ವಜನಿಕರೂ ತೊಂದರೆ ಅನುಭವಿಸುವಂತಾಗಿದೆ.
ಅಪರಾಧ ಪ್ರಕರಣ ನಡೆದಾಗ ಆರೋಪಿಗಳ ಬಿಟ್ಟು ಹೋಗಿರುವ ಗುರುತಿನ ಜಾಡು ಹಿಡಿಯಲು ಪೊಲೀಸರೊಂದಿಗೆ ಸ್ಥಳದಲ್ಲಿ ಶ್ವಾನದಳ ಹಾಜರಿರಲೇಬೇಕು. ಆದರೆ, ಜಿಲ್ಲೆಯಲ್ಲಿ ದೂರದ ರಾಯಚೂರು ಅಥವಾ ಗುಲ್ಬರ್ಗದ ಶ್ವಾನವನ್ನೇ ನೆಚ್ಚಿಕೊಳ್ಳಬೇಕಾಗಿದೆ. ಇದರಿಂದ ಜಿಲ್ಲೆಯ ಪೊಲೀಸರಿಗೆ ಅಪರಾಧ ಪ್ರಕರಣಗಳನ್ನು ಭೇದಿಸುವುದು ಕಷ್ಟ ಸಾಧ್ಯ.
ಮಹಿಳಾ ಸೆಲ್ ಇಲ್ಲ: ಪೊಲೀಸರು ಬಂಧಿಸುವ ಮಹಿಳಾ ಆರೋಪಿಗಳನ್ನಿರಿಸಲು ಇಲ್ಲಿ ಪ್ರತ್ಯೇಕ ಮಹಿಳಾ ಸೆಲ್ ಸಹ ಇಲ್ಲ. ಗುಲ್ಬರ್ಗ ಜೈಲಿಗೆ ಕರೆದೊಯ್ಯಬೇಕು. ನಂತರ ವಿಚಾರಣೆ ಇದ್ದಾಗ ಕೈದಿಗಳನ್ನು ಭದ್ರತೆಯೊಂದಿಗೆ ಅಲ್ಲಿಂದ ಕರೆತಂದು ಇಲ್ಲಿಯ ನ್ಯಾಯಾಲಯದಲ್ಲಿ ಹಾಜರುಪಡಿಸಬೇಕು.
ಜೊತೆಗೆ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ತಡೆಗೂ ಜಿಲ್ಲೆಯಲ್ಲೊಂದು ಮಹಿಳಾ ಠಾಣೆಯೂ ಇಲ್ಲವಾಗಿದೆ.
ಟ್ರಾಫಿಕ್ ಪೊಲೀಸ್ ಇಲ್ಲ: ಜಿಲ್ಲಾ ಕೇಂದ್ರ ಎಂದ ಮೇಲೆ ವಾಹನ ಸಂಚಾರ ದಟ್ಟಣೆ ಸಹಜ. ಆದರೆ, ಇದನ್ನು ನಿಯಂತ್ರಿಸಲು ಜಿಲ್ಲಾ ಕೇಂದ್ರವೊಂದರಲ್ಲಿ ಟ್ರಾಫಿಕ್ ಪೊಲೀಸ್ ಸಹ ಇಲ್ಲವೆಂದರೆ ನಂಬಲೇಬೇಕು. ಶಾಂತಿ ಸುವ್ಯವಸ್ಥೆಗೇ ಇಲ್ಲಿ ಸಿಬ್ಬಂದಿ ಕೊರತೆ ಇರುವಾಗ ಟ್ರಾಫಿಕ್‌ಗೆ ಸಿಬ್ಬಂದಿ ನಿಯೋಜಿಸುವುದು ಇಲಾಖೆ ಅಧಿಕಾರಿಗಳಿಗೆ ಕಷ್ಟದ ಕೆಲಸ.
ಎಸ್ಪಿಗಿಲ್ಲ ವಸತಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಇಲ್ಲಿ ವಸತಿ ವ್ಯವಸ್ಥೆಯೇ ಇಲ್ಲ. ಈ ಹಿಂದಿನ ಎಸ್ಪಿ ಡಿ.ರೂಪಾ ಮೂರು ವರ್ಷಗಳ ಕಾಲ ಶಹಾಪುರದ ಭೀಮರಾಯನಗುಡಿಯಲ್ಲಿರುವ ಕೆಬಿಜೆಎನ್‌ಎಲ್ ಗೆಸ್ಟ್ ಹೌಸ್‌ನಲ್ಲೇ ವಾಸ್ತವ್ಯ ಮಾಡಿದ್ದರು. ಈಗ ಹೊಸದಾಗಿ ಬಂದಿರುವ ವಂಶಿಕೃಷ್ಣ ಅವರಿಗಾಗಿ ಜಿಲ್ಲಾ ಕೇಂದ್ರದಲ್ಲಿ ಬಾಡಿಗೆ ಮನೆ ಹುಡುಕಾಟ ಒಂದು ವಾರದಿಂದ ನಡೆಯುತ್ತಿದ್ದು, ಇನ್ನೂ ಸಿಕ್ಕಿಲ್ಲ.
ಗೃಹ ಸಚಿವರು ಖಾಕಿಗಲ ಕಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ತರ್ತು ಗಮನ ನೀಡುವುದು ಅಗತ್ಯವಾಗಿದೆ. ಈ ಸಾಲಿನ ಬಜೆಟ್‌ನಲ್ಲಾದರೂ ಟ್ರಾಫಿಕ್, ಮಹಿಳಾ ಪೊಲೀಸ್ ಠಾಣೆ ಸ್ಥಾಪನೆಗೆ ಆದ್ಯತೆ ನೀಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.
-ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments