ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಆರೋಗ್ಯ ಕೇಂದ್ರಕ್ಕೆ ಸಿಬ್ಬಂದಿ ಕೊರತೆ

Lingaraj Badiger
Updated On : 30 Jan 2013, 11:03 am

ಅಫಜಲ್ಪುರ: ತಾಲೂಕಿನ ದೇವಲಗಾಣಗಾಪುರದ ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿ ಕೊರತೆಯಿಂದ ನರಳುತ್ತಿದೆ. ಈ ಆರೋಗ್ಯ ಕೇಂದ್ರದಲ್ಲಿ ಮೂರು ಜನ ವೈದ್ಯರಿರಬೇಕು, ಕೇವಲ ಒಬ್ಬ ವೈದ್ಯರಿದ್ದಾರೆ. ಅವರು ರಜೆಯ ಮೇಲೆ ಹೋದರೆ ಆಸ್ಪತ್ರೆಗೆ ಬರುವ ರೋಗಿಗಳನ್ನು ಪರೀಕ್ಷಿಸಲು ಯಾರು ಇರುವುದಿಲ್ಲ. ಈ ಆಸ್ಪತ್ರೆಯಲ್ಲಿ ನರ್ಸ್ (ದಾದಿ) ಗಳಿಲ್ಲ, ಕಸಗುಡಿಸುವವರಿಲ್ಲ, ಸರ್ಕಾರ ನೀಡಿದ ಹಲವಾರು ಉಪಕರಣಗಳು ಸಿಬ್ಬಂದಿ ಇಲ್ಲದೆ ಹಾಳಾಗುತ್ತಿವೆ. ಸರ್ಕಾರ ಈ ಆಸ್ಪತ್ರೆಯ ಜತೆಗೆ ಸ್ಟೇಷನ್ ಗಾಣಗಾಪುರದ ಸಮುದಾಯ ಆರೋಗ್ಯ ಕೇಂದ್ರ ಮಂಜೂರು ಮಾಡಿ 5 ವರ್ಷಗಳು ಕಳೆದಿವೆ. ಸರಿಯಾದ ಕಟ್ಟಡಗಳಿವೆ, ಆಸ್ಪತ್ರೆಗೆ ಬೇಕಾಗುವ ಎಲ್ಲ ಸೌಲಭ್ಯಗಳಿವೆ. ಸಿಬ್ಬಂದಿ ಕೊರತೆಯಿರುವುದರಿಂದ ಸಮುದಾಯ ಆರೋಗ್ಯ ಕೇಂದ್ರ ಯಾರಿಗೂ ಉಪಯೋಗವಾಗುತ್ತಿಲ್ಲ. ದೇವಲಗಾಣಗಾಪುರದಲ್ಲಿ ದತ್ತಾತ್ರೇಯ ದೇವಸ್ಥಾನಕ್ಕೆ ಪ್ರತಿದಿವಸ ಸಾವಿರಾರು ಯಾತ್ರಿಕರು ಆಗಮಿಸುತ್ತಾರೆ. ಕೂಡಲೇ ಜಿಲ್ಲಾ ವೈದ್ಯಾಧಿಕಾರಿಗಳು ತಾತ್ಕಾಲಿಕವಾಗಿ ಹೆಚ್ಚುವರಿ ವೈದ್ಯರನ್ನು ಈ ಸಮುದಾಯ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆ ಮಾಡಬೇಕೆಂದು ತಾಪಂ ಸದಸ್ಯ ದತ್ತು ಸಿಂಧೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement