ಆರೋಗ್ಯ ಶಿಬಿರದಲ್ಲಿ ಹುಟ್ಟುಹಬ್ಬ ಆಚರಣೆ
ಜೇವರ್ಗಿ: ಧರ್ಮಸಿಂಗ್ ಫೌಂಡೇಷನ್ ಅಧ್ಯಕ್ಷ ಡಾ. ಅಜಯಸಿಂಗ್ ತಮ್ಮ 39ನೇ ಹುಟ್ಟುಹಬ್ಬವನ್ನು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಆಚರಿಸಿಕೊಂಡರು.
ಕೇಕ್ ಕತ್ತರಿಸಿ ಅಭಿಮಾನಿಗಳಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಯಡ್ರಾಮಿ ಸ್ವಾಮೀಜಿ, ಮಾಗಣಗೇರಿಯ ಡಾ. ವಿಶ್ವಾರಾಧ್ಯ ಶಿವಾಚಾರ್ಯ, ಸೊನ್ನದ ಶಿವಾನಂದ ಸ್ವಾಮಿ, ಕಡಕೋಳದ ರುದ್ರಮುನಿ ಶಿವಾಚಾರ್ಯ, ಇಜೇರಿಯ ಸೈಯದ್ ಇಸ್ಮಾಯಿಲ್ ಸಜ್ಜಾದೆನಸಿನ್ ಸೇರಿದಂತೆ ತಾಲೂಕಿನ ವಿವಿಧ ಮಠಾಧೀಶರು ಹಾಜರಿದ್ದರು. ಡಾ. ಅಜಯಸಿಂಗ್ ಮತ್ತು ಧರ್ಮಪತ್ನಿ ಶ್ವೇತಾ ದಂಪತಿಗೆ ಆಶೀರ್ವಾದ ಮಾಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.