ಹೆದರಿಸಿ ಜಮೀನು ವರ್ಗಾಯಿಸಿಕೊಂಡ ಭೂಪರು!
ಗುಲ್ಬರ್ಗ: ವ್ಯಕ್ತಿಯೊಬ್ಬನನ್ನು ಅಪಹರಿಸಿ ನಗರದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಜೀವ ಬೆದರಿಕೆ ಹಾಕಿ ಕಾಗದದ ಮೇಲೆ ಜಮೀನು ವರ್ಗಾವಣೆಯ ಸಹಿ ಮಾಡಿಸಿಕೊಂಡ ಘಟನೆ ನಡೆದಿದೆ.
ಖಾದ್ರಿ ಚೌಕ್ನ ನಿವಾಸಿ ಮಹ್ಮದ್ ಇಲಾಯಾಸ್ ಶೇಖ್ ಅಪಹರಣಕ್ಕೆ ಒಳಗಾಗಿ ಸಹಿ ಮಾಡಿದವನು. ಸುಲ್ತಾನಪುರ ಗ್ರಾಮದ ಸೀಮಾಂತರದಲ್ಲಿ ಸರ್ವೆ ನಂ. 186/4ರಲ್ಲಿ 2 ಎಕರೆ ಜಮೀನು ಹೊಂದಿರುವದ ಮಹ್ಮದ್ ಇತ್ತೀಚೆಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಅಸ್ಲಾಂ ತಂದೆ ಮಹ್ಮದ್ ಬಾಸೀರ್ ಸಾಬ್, ಶೇಖ್ ಜಾಫರ್ ಹುಸೇನ್, ಸೈಯದ್ ಸರ್ವರ್ ಅಲಿ ಎಂಬುವವರು ಟವೇರಾ ವಾಹನದಲ್ಲಿ ಬಂದು ಒತ್ತಾಯದಿಂದ ಅಪಹರಿಸಿ ಗುಲ್ಬರ್ಗ ಉಪ ನೋಂದಣಾಧಿಕಾರಿ ಕಚೇರಿಗೆ ಬಂದು ಸಹಿ ಮಾಡದಿದ್ದರೆ ಮಗ, ಮಗಳನ್ನು ಕೊಲೆ ಮಾಡುವುದಾಗಿ ಹೆದರಿಸಿ ಸಹಿ ಮಾಡಿಸಿಕೊಂಡು ತಮ್ಮ ಹೆಸರಿಗೆ ಜಮೀನು ವರ್ಗಾಯಿಸಿಕೊಂಡಿದ್ದಾರೆ. ಈ ಕುರಿತು ಮಹ್ಮದ್ ಗುಲ್ಬರ್ಗ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.