ಬಿಜೆಪಿ ಬಿಡೋಲ್ಲ, ಗೊಂದಲ ಬೇಡ: ಶಾಸಕ ವಾಲ್ಮೀಕಿ
ಗುಲ್ಬರ್ಗ/ಶಹಾಬಾದ್: ನಾನು ಕೆಜೆಪಿ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ. ನನ್ನನ್ನು ಬೆಳೆಸಿದ ಪಕ್ಷ ಬಿಜೆಪಿಯಾಗಿದ್ದು, ಇಲ್ಲಿಯೇ ಇರುತ್ತೇನೆ. ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಬೇಡ ಎಂದು ಚಿತ್ತಾಪುರ ಶಾಸಕ ವಾಲ್ಮೀಕಿ ನಾಯಕ ಸ್ಪಷ್ಟಪಡಿಸಿದರು. ಮಾಲಗತ್ತಿ ಗ್ರಾಮದ ತಾಂಡಾದಲ್ಲಿ ಬಂಜಾರ ಅಭಿವೃದ್ಧಿ ನಿಗಮದಿಂದ 10 ಲಕ್ಷ ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು. ಗ್ರಾಮದ ಮುಖಂಡರಾದ ಅಪ್ಪಾಸಾಹೇಬ್ ಪಾಟೀಲ್, ಪ್ರಕಾಶರೆಡ್ಡಿ ಪಾಟೀಲ್ ಯರಗಲ್, ಯಂಕಾರೆಡ್ಡಿ ಪಾಟೀಲ್, ಸಿದ್ದಣ್ಣ ಕಲಶೆಟ್ಟಿ, ಮಂಜುನಾಥ ವಾರದ, ಶರಣಪ್ಪ ಸಣಮೋ, ಕಾಶಿನಾಥ ಸಣಮೋ, ನಿಂಗಣ್ಣ ಮುದುಗಪ್ಪಗೋಳ, ಶಂಕರವಾಡಿ ಗ್ರಾಪಂ ಸದಸ್ಯ ಶಂಕರ ಸಂಕನೂರ, ಪಿಡಿಒ ಗುರುನಾಥ ರೆಡ್ಡಿ, ಭೂಸೇನಾ ಅಧಿಕಾರಿ ಜಾಫರ್, ವಿಜಯ ರಾಠೋಡ, ಸತೀಶ್ ಕರಗುಡ ಇದ್ದರು.