ಟೋಕರಿ ಕೋಲಿ ಸಮಾಜದ ಜಾಗೃತಿ ಸಭೆ
ಯಾದಗಿರಿ: ಶಹಾಪುರ ತಾಲೂಕಿನ ಟೋಕಾಪುರ ಗ್ರಾಮದಲ್ಲಿ ಟೋಕರಿ ಕೋಲಿ (ಕಬ್ಬಲಿಗ) ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ ನೇತೃತ್ವದಲ್ಲಿ ಕೋಲಿ ಸಮಾಜದ ಬೃಹತ್ ಜನಜಾಗೃತಿ ಸಭೆ ಈಚೆಗೆ ನಡೆಯಿತು. ಉಮೇಶ ಮುದ್ನಾಳ ಮಾತನಾಡಿ, ಕೋಲಿ ಸಮಾಜದ ಜನ ಎಲ್ಲ ರಂಗಗಳಲ್ಲಿ ಹಿಂದುಳಿದಿದ್ದು, ಇದಕ್ಕೆ ಅನಕ್ಷರತೆ ಹಾಗೂ ಅಜ್ಞಾನವೇ ಕಾರಣವಾಗಿವೆ. ಜನ ಮೊದಲು ಸಂಘಟಿತರಾಗಿ ಮೂಡನಂಬಿಕೆಗಳಿಂದ ಹೊರ ಬಂದು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ನಿರಂತರ ಹೋರಾಟ ಮಾಡಬೇಕು ಎಂದು ಹೇಳಿದರು.
ಸಭೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು ಸಮಸ್ಯೆಗಳನ್ನು ಬಿಚ್ಚಿಟ್ಟರು. ಟೋಕಾಪುರ ಗ್ರಾಮಕ್ಕೆ ಶೀಘ್ರ ನ್ಯಾಯ ಬೆಲೆ ಅಂಗಡಿ, ಶುದ್ಧ ಕುಡಿಯುವ ನೀರು, ವಿದ್ಯುತ್ ಸಮಸ್ಯೆ ನಿವಾರಿಸಬೇಕೆಂದು ಮನವಿ ಮಾಡಿದರು. ಜಿಲ್ಲಾಧಿಕಾರಿಗಳ ಗಮನಕ್ಕೆ ಈ ವಿಷಯ ತಂದು ಸಮಸ್ಯೆಗಳನ್ನು ಶೀಘ್ರದಲ್ಲೆ ಬಗೆಹರಿಸುವ ಭರವಸೆಯನ್ನು ಉಮೇಶ ನೀಡಿದರು. ಮುಂದಿನ ಸಭೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಯುವಕ ಸಂಘದ ಗ್ರಾಮ ಘಟಕ ರಚಿಸಲು ನಿರ್ಧರಿಸಲಾಯಿತು. ಶಿವು ಮುತ್ಯಾ, ಡಾ. ಅಮಾತ್ಯೆಪ್ಪ, ರಾಯಣ್ಣ ಗೌಡ, ಹಣಮಂತ್ರಾಯ ಮಲ್ಲಪ್ಪ ಅಂಗಡಿ, ಈಜ್ಜಪ್ಪ, ಮಲ್ಲಪ್ಪ ಕೆ., ಚಂದ್ರರಡ್ಡಿ ಇದ್ದರು.
--
ಸ್ಮರಣ ಸಂಚಿಕೆಗೆ ಲೇಖನಗಳ ಆಹ್ವಾನ
ಯಾದಗಿರಿ: ಜುಲೈ ತಿಂಗಳ ಕೊನೆಯ ವಾರದಲ್ಲಿ ಯಾದಗಿರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಥಮ ಜಿಲ್ಲಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಈ ಸಮ್ಮೇಳನದ ಅಂಗವಾಗಿ ಸಂಘವು ಜಿಲ್ಲೆಯ ಸಮಗ್ರ ಮಾಹಿತಿಯನ್ನು ಒಳಗೊಂಡ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲು ತೀರ್ಮಾನಿಸಿದ್ದು, ಅದಕ್ಕಾಗಿ ಆಸಕ್ತಿಯುಳ್ಳ ಬರಹಗಾರರು ಯಾದಗಿರಿ ಜಿಲ್ಲೆಯ ಐತಿಹಾಸಿಕ, ಜನಪದ, ಭೌಗೋಳಿಕ, ಜಿಲ್ಲೆಯಲ್ಲಿ ನಡೆದ ಬಂದ ಮಾಧ್ಯಮ ಮಾಹಿತಿ, ಹಿರಿಯ ಪತ್ರಕರ್ತರ ವಿವರ ಮತ್ತು ಹಲವಾರು ಮಹತ್ವದ ಲೇಖನಗಳನ್ನು ಅಹ್ವಾನಿಸಿದೆ. ಅದಕ್ಕಾಗಿ ಲೇಖಕರು ತಮ್ಮ ಲೇಖನಗಳನ್ನು ಜು.15ರೊಳಗಾಗಿ ಸಂಘದ ಅಧ್ಯಕ್ಷ ಸಂಜೀವರಾವ ಕುಲಕರ್ಣಿ ಕೆಂಭಾವಿ, ಪ್ರಧಾನ ಕಾರ್ಯದರ್ಶಿ ಬಿ.ಎಂ. ಜಗದೀಶ, ಸುದ್ದಿಮೂಲ ಕಾರ್ಯಾಲಯ ಯಾದಗಿರಿ ಇವರಿಗೆ ಸಲ್ಲಿಸಲು ಕೋರಲಾಗಿದೆ. ಇ- ಮೇಲ್ ಮೂಲಕ ಲೇಖನ ಕಳಿಸುವವರು. ಞಛ್ಜಜ್ಝಝಝ್ಝಟಣ್ಜಟಛ್ಝಟ.್ಛ್ಟಟ, ಡಛ್ಞಿ.1008ಣ್ಜಟಛ್ಝಟ.್ಛ್ಟಟ, ಣಛಜ್ಜ್ಝ್ಠ್ಝಛಟ್ಝಿಟಣ್ಜಟಛ್ಝಟ.್ಛ್ಟಟ, ್ಛಠ್ಠಛಡಛಜ.ಜ್ಟಜಢಿಛಜ್ಞಛ್ಠಣ್ಜಟಛ್ಝಟ.್ಛ್ಟಟ, ಟ್ಜ್ಞಿಛ್ಠಢಿಛ್ಠಣ್ಜಟಛ್ಝಟ.್ಛ್ಟಟ ಕಳುಹಿಸಲು ಕೋರಲಾಗಿದೆ.