ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಡಾ. ರಾಯ್ ಆದರ್ಶ ಅಳವಡಿಸಿಕೊಳ್ಳಿ

Lingaraj Badiger
Updated On : 2 Jul 2013, 10:52 am

ಕ.ಪ್ರ. ವಾರ್ತೆ, ಯಾದಗಿರಿ, ಜು.1
ಡಾ. ಬಿ.ಸಿ. ರಾಯ್ ಅವರ ನೆನಪಿನಲ್ಲಿ ಪ್ರತಿ ವರ್ಷ ಜು.1ರಂದು ವೈದ್ಯರ ದಿನವೆಂದು ಆಚರಿಸಲಾಗುತ್ತದೆ. ರೋಗಿಗಳನ್ನು ಚಿಕಿತ್ಸೆ ನೀಡುತ್ತಿದ್ದಾಗಲೇ ಕೊನೆಯುಸಿರೆಳೆದ ಕಾಯಕ ಜೀವಿ ಬಿ.ಸಿ. ರಾಯ್ ಅವರ ಆದರ್ಶ ವೈದ್ಯಕೀಯ ಜೀವನವನ್ನು ಎಲ್ಲ ವೈದ್ಯರು ನಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಲ್ಲಿಕಾರ್ಜುನ ಮುಕ್ಕಾ ಹೇಳಿದರು.
ನಗರದ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉತ್ತಮ ವೈದ್ಯರಾಗಿ: ಬಿ.ಸಿ. ರಾಯ್ ಅವರು ಹುಟ್ಟಿದ ಹಾಗೂ ಮರಣ ಹೊಂದಿದ ದಿನವಾದ ಜು. 1ರಂದು ವೈದ್ಯರ ದಿನವೆಂದೇ ಕರೆಯಲಾಗುತ್ತದೆ. ರಾಜಕೀಯದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಅವರು ವೈದ್ಯಕೀಯ ಸೇವೆ ಮಾತ್ರ ಬಿಡಲಿಲ್ಲ. ಅವರ ಆದರ್ಶ ಜೀವನ ಇಂದಿನ ವೈದ್ಯರಾದ ನಾವು ಪಾಲಸಿ ಉತ್ತಮ ವೈದ್ಯರೆಂದು ಹೆಸರು ಪಡೆಯಬೇಕೆಂದು ಕರೆ ನೀಡಿದರು.
ವೈದ್ಯರನ್ನು ದೇವರೆಂದೇ ಪರಿಗಣಿಸುತ್ತಾರೆ. ಇದು ನಮ್ಮ ಸಮಾಜ ವೈದ್ಯಕೀಯ ರಂಗಕ್ಕೆ ನೀಡಿದ ಬಹು ದೊಡ್ಡ ಗೌರವ. ಹಾಗಾಗಿ ರೋಗಿ ಮತ್ತು ವೈದ್ಯರ ನಡುವಿನ ಸಂಬಂಧವೂ ಭಾವಪೂರ್ಣವಾಗಿರಬೇಕು. ವೈದ್ಯರಲ್ಲಿ ನಾವು ನಂಬಿಕೆ ಇಡಬೇಕು. ಈ ನಂಬಿಕೆಯೇ ನಮ್ಮನ್ನು ಪೋಷಿಸುತ್ತದೆ ಎಂದು ಹೇಳಿದರು.
ವೈದ್ಯಕೀಯ ಸೇವೆ ವ್ಯಾಪಾರೀಕರಣ- ವಿಷಾದ: ತಾಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಕಾಂತ ನರಿಬೋಳಿ ಮಾತನಾಡಿ, ಡಾ. ಬಿ.ಸಿ. ರಾಯ್ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಅಪಾರ. ಅವರ ಸೇವೆ ಮತ್ತು ಆದರ್ಶ ಜೀವನವನ್ನು ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಆದರೆ ಇಂದಿನ ದಿನಗಳಲ್ಲಿ ಕೆಲವು ವೈದ್ಯರು ವೈದ್ಯಕೀಯ ಸೇವೆಯನ್ನು ವ್ಯಾಪಾರವನ್ನಾಗಿ ಮಾಡಿಕೊಂಡಿರುವುದು ವಿಷಾದನೀಯ ಎಂದು ಹೇಳಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ವಂದಾನಾ ಗಾಳಿ, ಜಿಲ್ಲಾ ಸರ್ಜನ್ ಡಾ. ವಿಜಯಕುಮಾರ, ಡಾ. ಭಗವಂತ ಅನೃವಾರ್, ಡಾ. ಸೂರ್ಯಪ್ರಕಾಶ ಕಂದಕೂರ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement