ದಿನೇಶ ವಿ.ಸಿ.ಗೆ ಹೂಗಾರ ಸ್ಮಾರಕ ಪ್ರಶಸ್ತಿ
ಯಾದಗಿರಿ: ಕರ್ನಾಟಕ ಮೀಡಿಯಾ ಮತ್ತು ನ್ಯೂಸ್ ಸೆಂಟರ್, ಪತ್ರಕರ್ತರ ವೇದಿಕೆ ಬೆಂಗಳೂರು ಆಶ್ರಯದಲ್ಲಿ ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ಸಮಾರಂಭದಲ್ಲಿ ಇಲ್ಲಿಯ ವರದಿಗಾರ ದಿನೇಶ ವಿ.ಸಿ. ಅವರಿಗೆ ಹೂಗಾರ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ದಿನೇಶ ಅವರು ಕಾರ್ಯನಿರತ ಪತ್ರಕರ್ತರ ಸಂಘದ ಯಾದಗಿರಿ ತಾಲೂಕಾಧ್ಯಕ್ಷರಾಗಿಯೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿದ ಈ ಸಾಲಿನ ಹೂಗಾರ ಸ್ಮಾರಕ ಮಾದ್ಯಮ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಹಾಂತಲಿಂಗ ಶಿವಾಚಾರ್ಯರು, ವೇದಿಕೆ ಅಧ್ಯಕ್ಷ ಮಹೇಶಬಾಬು ಸರವೆ, ಚಿತ್ರನಟಿ ರೂಪಿಕಾ, ರಾಘವೇಂದ್ರ ಗಂಗಾವತಿ, ಜಿ.ಎಸ್. ಗೋನಾಳ ಇತರರು ಪ್ರಶಸ್ತಿ ನೀಡಿ ದಿನೇಶ ಅವರನ್ನು ಸನ್ಮಾನಿಸಿದರು.