ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಗುಲ್ಬರ್ಗ ಬಿ ನಗರವನ್ನಾಗಿ ಘೋಷಿಸಿ'

Lingaraj Badiger
Updated On : 3 Jul 2013, 11:41 am

ಗುಲ್ಬರ್ಗ: ಗುಲ್ಬರ್ಗ ನಗರವನ್ನು ಬಿ ನಗರವನ್ನಾಗಿ ಘೋಷಣೆ ಮಾಡಬೇಕು ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಶಶೀಲ್ ನಮೋಶಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಪೌರಾಡಳಿತ ಸಚಿವರಾದ ಖಮರುಲ್ ಇಸ್ಲಾಂ ಅವರಿಗೆ ಪತ್ರ ಬರೆದಿರುವ ಅವರು, ಕೇಂದ್ರ ಸರ್ಕಾರವು ನೌಕರಿಗೆ 6ನೇ ವೇತನ ಆಯೋಗದ ಶಿಫಾರಸ್ಸಿನಂತೆ 2001 ಜನಗಣತಿಯ ಆಧಾರದ ಮೇಲೆ ಮನೆ ಬಾಡಿಗೆ, ಭತ್ಯೆ ಮತ್ತು ನಗರ ಪರಿಹಾರ ಭತ್ಯೆಗಳನ್ನು ಪರಿಷ್ಕರಿಸಿದೆ. ಇದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.
ಪರಿಷ್ಕರಣೆ ಬಗ್ಗೆ ನಿರಾಶೆ: ಕರ್ನಾಟಕ ಸರ್ಕಾರದ ನೌಕರರಿಗೆ 6ನೇ ವೇತನ ಆಯೋಗ ಅನುಷ್ಠಾನಗೊಳಿಸುವಾಗ ಗುಲ್ಬರ್ಗ ನಗರವನ್ನು ಬಿ ನಗರವನ್ನಾಗಿ 2001- 2011ರ ಜನಗಣತಿಯ ಆಧಾರದ ಮೇಲೆ ಪರಿಗಣಿಸಿ ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆಯನ್ನು ಪರಿಷ್ಕರಿಸುವ ಬಗ್ಗೆ ನೌಕರರು ಆಶಾಭಾವನೆಯನ್ನು ಹೊಂದಿದ್ದರು. ಆದರೆ, ಅದು ನಿರಾಶೆಯಲ್ಲಿ ಅಂತ್ಯಗೊಂಡಿದೆ ಎಂದು ತಿಳಿಸಿದ್ದಾರೆ.
--
ರಸ್ತೆ ಅಗಲೀಕರಣಕ್ಕೆ ಒತ್ತಾಯ: ಧರಣಿ
ಗುಲ್ಬರ್ಗ: ನಗರದ ಲಾಲಗೇರಿ ಕ್ರಾಸ್‌ನಿಂದ ನ್ಯೂ ರಾಘವೇಂದ್ರ ಕಾಲೋನಿ ಮೂಲಕ ಹಾದು ಹೋಗುವ ಜಂಗೆ ಮನೆ ಹತ್ತಿರದ ಮುಖ್ಯ ರಸ್ತೆ ಅಗಲೀಕರಣ ಮಾಡುವಂತೆ ಒತ್ತಾಯಿಸಿ ನಾಗರೀಕರು ಮಹಾನಗರ ಪಾಲಿಕೆ ಎದುರು ಧರಣಿ ನಡೆಸಿದರು. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸುಮಾರು 40 ರಿಂದ 50 ಸಾವಿರ ಜನರು ತೊಂದರೆ ಅನುಭವಿಸುವಂತಾಗಿದೆ. ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರು ಮನವಿ ಮಾಡುತ್ತ ಬಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು. ಗುರುರಾಜ ಜೋಶಿ, ಅಮೀತ್ ಕುಲಕರ್ಣಿ, ಸಂಜೀವ ಸೇರಿದಂತೆ ಹಲವಾರು ಜನರು ಧರಣಿಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement