ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವೈದ್ಯ ಚೌದ್ರಿ ಸೇವೆ ಅವಿಸ್ಮರಣೀಯ: ಪಾಟೀಲ

Lingaraj Badiger
Updated On : 3 Jul 2013, 11:46 am

ಕನ್ನಡಪ್ರಭ ವಾರ್ತೆ   ಸುರಪುರ  ಜು.2
ಸಮಾಜದಲ್ಲಿ ವೈದ್ಯರ ಸೇವೆ ಅಮೂಲ್ಯವಾದದ್ದು. ರೋಗಿಯ ಮನಸ್ಥಿತಿಯನ್ನು ಅರಿತು ಚಿಕಿತ್ಸೆ ನೀಡುವ ವೈದ್ಯರ ಸೇವೆಯನ್ನು ಸಮಾಜ ಮತ್ತು ರೋಗಿಗಳು ಸದಾ ಕಾಲ ನೆನಪಿಡುವಂತೆ ಮಾಡುತ್ತದೆ. ಈ ನಿಟ್ಟಿನಲ್ಲಿ ಚೌದ್ರಿಯವರ ಸೇವೆ ಅವಿಸ್ಮರಣೀಯ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ಅಭಯಕುಮಾರ ಪಾಟೀಲ ಹೇಳಿದರು.
ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಮಂಗಳವಾರ ಏರ್ವಡಿಸಿದ್ದ ನಿವೃತ್ತ ವೈದ್ಯಾಧಿಕಾರಿ ವಿ.ಎಲ್. ಚೌದ್ರಿಯವರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಹೆಸರುವಾಸಿ: ಡಾ. ಚೌದರಿ ಅತ್ಯಂತ ಸರಳ ಹಾಗೂ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದಾರೆ. ಒಬ್ಬ ವೈದ್ಯನಲ್ಲಿರಬೇಕಾದ ಎಲ್ಲ ಗುಣಗಳು ಚೌದ್ರಿಯವರಲ್ಲಿ ಕಾಣಬಹುದಾಗಿತ್ತು. ಕೆಳದರ್ಜೆಯ ನೌಕರರಿಂದ ಉತ್ತಮವಾಗಿ ಕೆಲಸ ತಗೆದುಕೊಳ್ಳುತ್ತಿದ್ದರು. ಒತ್ತಡದ ಪರಿಸ್ಥಿತಿಯಲ್ಲಿಯೂ ವಿಚಲಿತರಾಗದೆ ರೋಗಿಗಳ ರೋಗ ಗುಣಪಡಿಸುವ ಮೂಲಕ ಜಿಲ್ಲೆಯಲ್ಲಿ ಹೆಸರು ಗಳಿಸಿದ್ದರು. ಇವರ ವೈದ್ಯ ವೃತ್ತಿ ಜೀವನ ಇತರರಿಗೂ ಆದರ್ಶವಾಗಿದೆ ಎಂದು ಗುಣಗಾನ ಮಾಡಿದರು.
ಉಪ ಖಜಾನ ನಿವೃತ್ತ ಅಧಿಕಾರಿ ಮೋರೆಪ್ಪ ಕರೆಗಾರ್ ಮಾತನಾಡಿ, ಸರ್ಕಾರಿ ನೌಕರರಿಗೆ ವರ್ಗಾವಣೆ ಮತ್ತು ನಿವೃತ್ತಿ ಕಡ್ಡಾಯ. ಆದರೆ ಸೇವೆಯಲ್ಲಿ ಅವರ ಕಾರ್ಯವೈಖರಿಯನ್ನು ಜನ ಯಾವತ್ತೂ ಮರೆಯುವುದಿಲ್ಲ. ಡಾ.ಚೌದರಿ ಗ್ರಾಮೀಣ ಪ್ರದೇಶದಲ್ಲಿ ಜನಸಿ ವೈದ್ಯ ವೃತ್ತಿಯ ಮೂಲಕ ಸಮಾಜ ಸೇವೆ ಮೂಲಕ ಇಂದು ಜನಮಾನಸದಲ್ಲಿ ಉಳಿದಿದ್ದಾರೆ ಎಂದರು.
ತಾಲೂಕು ಆರೋಗ್ಯಧಿಕಾರಿ ಡಾ. ಆರ್.ವಿ. ನಾಯಕ, ಡಾ. ನಾಗನಾಥ, ಡಾ. ಓಂಪ್ರಕಾಶ ಕಟ್ಟಿಮನಿ, ಚಂದ್ರಶೇಖರಸ್ವಾಮಿ, ಚಂದ್ರಶೇಖರ ಜಡಿಮರಳ್ ವೇದಿಕೆಯಲ್ಲಿದ್ದರು. ನಿಂಗಯ್ಯ ಬೂದಗುಂಪಿ, ದೇವಿಂದ್ರಪ್ಪ ಬಳಿಚಕ್ರ, ಉಮಾರಾಣಿ, ಯಲಗುರೇಶ, ಗುರಣ್ಣ ಮಾತನಾಡಿದರು.
ಮರೆಯಲಾಗದ ಅನುಭವ: ಸನ್ಮಾನ ಸ್ವೀಕರಿಸಿದ ಡಾ. ವಿ.ಎಲ್. ಚೌದರಿ ಮಾತನಾಡಿ, ವೈದ್ಯಕೀಯ ವೃತ್ತಿ ಜೀವನದಲ್ಲಿ ಮರೆಯಲಾಗದ ಅನುಭವ ನೀಡಿದೆ. ಸೇವಾವಧಿಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಸಂತೃಪ್ತಿ ನನಗಿದೆ. ನನ್ನ ಕೆಳ ಅಧಿಕಾರಿಗಳು, ಸಿಬ್ಬಂದಿ ನನಗೆ ಉತ್ತಮ ರೀತಿಯ ಸಹಾಯ ಮತ್ತು ಸಹಕಾರ ನೀಡಿದರು ಎಂದು ಸ್ಮರಿಸಿದರು.
ವೈದ್ಯರಾದ ಶಫೀ ಉಜಮಾ, ಸುಭಾಷ ಡಬೀರ್, ಎಸ್.ಬಿ. ಪಾಟೀಲ್, ಹರ್ಷವರ್ಧನ ರಫಗಾರ್, ಇಮ್ತಿಯಾಜ್ ಹುಸೇನ್, ಬಿ.ಬಿ. ಹಿರೇಮಠ, ನೇತ್ರ ಚಿಕಿತ್ಸಕ ಶಮೀಮ್ ಅಹ್ಮದ, ಸಿಡಿಪಿಒ ಥಾಮಸ್ ದೊಡ್ಡಮನಿ, ಪ್ರಮುಖರಾದ ವಿ.ಎಸ್. ಜೋಷಿ, ಎಲ್.ಬಿ. ಕುಲಕರ್ಣಿ, ಶರಣಪ್ಪ ದಖನಿ, ಶಾಂತಗೌಡ ಪಾಟೀಲ್, ಮಾನಪ್ಪ ಕವಡಿಮಟ್ಟಿ, ಅಯ್ಯಣ್ಣಗೌಡ ಉಳ್ಳೆಸೂಗೂರು, ಗೌರಿಶಂಕರ, ಶರಣಪ್ಪ ಎತ್ತಿನಮನಿ, ಹಣಮಂತ ಕುಂಬಾರಪೇಟೆ ಸೇರಿದಂತೆ ಅನೇಕರು ಇದ್ದರು. ಬಸವರಾಜ ಶಾಸ್ತ್ರಿ ಶಹಾಪುರ ನಿರೂಪಿಸಿದರು. ಅಮರಪ್ಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement