ಜಮೀನು ದುರ್ಬಳಕೆ: ತನಿಖೆಗೆ ಒತ್ತಾಯ
ಗುಲ್ಬರ್ಗ: ಗುಲ್ಬರ್ಗ, ಬೀದರ್ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರೊಬ್ಬರು ಜಮೀನು ದುರ್ಬಳಕೆ ಮಾಡಿಕೊಂಡಿದ್ದು, ಬಗ್ಗೆ ತನಿಖೆ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.
ನಾವದಗಿ (ಬಿ) ಗ್ರಾಮದಲ್ಲಿ ಶಾಲೆಯಲ್ಲಿ ಪ್ರಾರಂಭಿಸಿ ಸಾಂಸ್ಕೃತಿಕ ಲೋಕದ ಹೆಸರಿನಲ್ಲಿ ಕಾನೂನುಬಾಹಿರವಾಗಿ ಮತ್ತು ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಹೆಸರಿನಲ್ಲಿರುವ ರು. 70 ಲಕ್ಷ ಮೌಲ್ಯದ ಜಮೀನು ತಮ್ಮ ಕುಟುಂಬದ ಸದಸ್ಯರ ಹೆಸರಿಗೆ ನೋಂದಾಯಿಸಿ ದುರ್ಬಳಕೆ ಮಾಡಿಕೊಂಡಿದ್ದು, ಕೂಡಲೇ ತನಿಖೆ ನಡೆಸಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ವೀರಭದ್ರ ಸಿಂಪಿ ಒತ್ತಾಯಿಸಿದ್ದಾರೆ.
ಉಮಾಶ್ರೀ ಭೇಟಿ: ಗುಲ್ಬರ್ಗಕ್ಕೆ ಆಗಮಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ಅವರನ್ನು ಭೇಟಿ ಮಾಡಿ ದೂರು ನೀಡಿದ ಸಿಂಪಿ ಅವರು, ಈ ಇಲಾಖೆ ದಶಕಗಳಿಂದ ಕೆಲವೇ ಕೆಲವರ ಸ್ವತ್ತಾಗಿ ಗುತ್ತಿಗೆ ಕೇಂದ್ರವಾಗುತ್ತಿರುವುದು ಖೇದದ ಸಂಗತಿಯಾಗಿದೆ. ಇದನ್ನು ಅಳಿಸಿ ಹಾಕಬೇಕು ಎಂದು ಮನವಿ ಮಾಡಿದರು.
ತಮ್ಮ ಅಧೀನದ ಇಲಾಖೆಯ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಪುಸ್ತಕ ಪ್ರಾಧಿಕಾರ ವಿವಿಧ ಅಕಾಡೆಮಿಗಳ ಅಧ್ಯಕ್ಷರು, ಸದಸ್ಯರನ್ನು ನೇಮಿಸುವಾಗ ನಾಡಿನ ಪ್ರಾತಿನಿಧಿಕವನ್ನು ಪರಿಗಣಿಸಿ ಅರ್ಹರಿಗೆ ಮಾತ್ರ ಅವಕಾಶಗಳನ್ನು ನೀಡಬೇಕು ಎಂದರು. ಇಲ್ಲಿ ಕೆಲವರು ಒಂದು ಅಕಾಡೆಮಿಯಿಂದ ಇನ್ನೊಂದು ಅಕಾಡೆಮಿ, ಪ್ರಾಧಿಕಾರ ಒಂದಿಲ್ಲೊಂದರಲ್ಲಿ ಸದಸ್ಯರಾಗಿ ಅರ್ಹತೆ ಇಲ್ಲದಿದ್ದರೂ ಸೇರಿಕೊಂಡು ಕುಳಿತಿದ್ದಾರೆ. ಇಂತವರಿಂದ ವಸೂಲಿ ಕಾರ್ಯಗಳು, ಪ್ರಶಸ್ತಿ, ಅವಕಾಶಗಳ ದುರ್ಬಳಕೆಗಳೆ ಕಾಣುತ್ತಿವೆ ಹೊರತು ಪ್ರಾಮಾಣಿಕ ಸೇವೆಯಾಗಲಿ, ತಾವು ಪ್ರತಿನಿಧಿಸಿದ ಭಾಗಕ್ಕೆ ಕೊಡುಗೆ ಸೊನ್ನೆಯಾಗಿದೆ ಎಂದು ತಿಳಿಸಿದರು.