'ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಿ'
ಗುಲ್ಬರ್ಗ: ಮೂಲ ಸೌಲಭ್ಯಗಳುಳ್ಳ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಗುಲ್ಬರ್ಗ ಜಿಲ್ಲೆಯಲ್ಲಿ ಸ್ಥಾಪಿಸಬೇಕೆಂದು ಎಐಡಿಎಸ್ಒ ಸಂಘಟನೆಯ ನಿಯೋಗ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲರಿಗೆ ಮನವಿ ಮಾಡಿದೆ.
ಹೈದ್ರಾಬಾದ್ ಕರ್ನಾಟಕ ಕೇಂದ್ರ ಸ್ಥಾನವಾಗಿರುವ ಹಾಗೂ ಪ್ರಾದೇಶಿಕ ವಲಯವಾಗಿರುವ ಗುಲ್ಬರ್ಗ ಜಿಲ್ಲೆಯಲ್ಲಿ ಸಾವಿರಾರು ಬಡ ಮತ್ತು ಕೆಳ ಮಧ್ಯಮ ವರ್ಗದ ವಿದ್ಯಾರ್ಥಿಗಳು ಮೆಡಿಕಲ್ ಓದಲು ಶೈಕ್ಷಣಿಕವಾಗಿ ಅರ್ಹರಾಗಿದ್ದರು. ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಿಲ್ಲ. ಹೀಗಾಗಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಮೆಡಿಕಲ್ ಕೋರ್ಸ್ನಿಂದ ವಂಚಿತರಾಗಿದ್ದಾರೆ ಎಂದು ನಿಯೋಗ ತಿಳಿಸಿತು. ವಿದ್ಯಾರ್ಥಿಗಳು ತಮ್ಮ ಕನಸಿನ ಕೋರ್ಸುಗಳಿಗೆ ಹೋಗದೆ ತೊಳಲುತ್ತಿದ್ದಾರೆ. ಹೀಗಾಗಿ ಗುಲ್ಬರ್ಗದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕೆಂದು ಜಗನ್ನಾಥ ಎಚ್ ಮತ್ತು ಎಸ್.ಎಂ. ಶರ್ಮಾ ಮನವಿ ಮಾಡಿದರು.