ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ನೌಕರಿ ಪಡೆಯುವ ಶಿಕ್ಷಣ ಬೇಡ, ಮಾಲೀಕನಾಗುವ ಶಿಕ್ಷಣ ಕೊಡಿ'

Mainashree
Updated On : 4 Jul 2013, 11:13 am

ಗುಲ್ಬರ್ಗ: ನೌಕರರಾಗುವ ಶಿಕ್ಷಣ ಬೇಡ, ಮಾಲೀಕನಾಗುವ ಶಿಕ್ಷಣ ಮಕ್ಕಳಿಗೆ ಕೊಡುವ ಶ್ರೇಷ್ಠ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿದರೆ ನಮ್ಮ ದೇಶದ ಹಿರಿಮೆ ಹೆಚ್ಚಾಗುವುದು ಸತ್ಯ ಎಂದು ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ್ ಸೇಡಂ ಅಭಿಪ್ರಾಯಪಟ್ಟರು.
ನಗರದಲ್ಲಿ ಹೈದ್ರಾಬಾದ್ ಕರ್ನಾಟಕ ಸಹೋದಯದ ವತಿಯಿಂದ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಮಾತನಾಡಿ, ಶಿಕ್ಷಣವೆಂದರೆ ಮಕ್ಕಳಲ್ಲಿ ಆತ್ಮವಿಶ್ವಾಸ ಹುಟ್ಟಿಸಬೇಕು. ಜೀವನದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದರು.
ನೀತಾ ಪುರೋಹಿತ, ಡೇವಿಡ್ ರಾವ, ಮಲ್ಲಿನಾತ ಮಠಪತಿ, ಜಾನ್ ಅಬ್ರಾಹಿಂ, ವಿಶ್ವೇಶ್ವರ, ಅರವಿಂದ ಕುಲಕರ್ಣಿ, 25ಕ್ಕೆ ಹೆಚ್ಚು ಸಿಬಿಎಸ್‌ಇ ಶಾಲೆಯ ಪ್ರಾಚಾರ್ಯರು, ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement