ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪಡಿತರ ಚೀಟಿ ನೋಂದಣಿಗೆ ವ್ಯವಸ್ಥೆ ಕಲ್ಪಿಸುವಂತೆ ಮನವಿ

Mainashree
Updated On : 4 Jul 2013, 11:13 am

ಕನ್ನಡಪ್ರಭ ವಾರ್ತೆ  ಚಿತ್ತಾಪುರ  ಜು.3
ತಾಲೂಕಿನ ವಚ್ಛಾ ಗ್ರಾಮದ ಜನತೆಗೆ ಪಡಿತರ ಚೀಟಿ ನೋಂದಣಿಗೆ ಮಾಡಬೂಳ ಗ್ರಾಪಂ ಕೇಂದ್ರ ಸ್ಥಾನದಲ್ಲಿ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮದ ಮುಖಂಡ ಸಿದ್ದಲಿಂಗ ಕಟ್ಟಿಮನಿ ನೇತೃತ್ವದಲ್ಲಿ ನೂರಾರು ಜನರು ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಿದರು.
ತಾಪಂ ಸಭಾಂಗಣದಲ್ಲಿ ನಡೆಯುತ್ತಿದ್ದ ಸಭೆಗೆ ಗ್ರಾಮದ ನೂರಾರು ಜನರು ಆಗಮಿಸಿ ತಮ್ಮ ಗೋಳು ಶಾಸಕರೆದುರು ತೋಡಿಕೊಂಡರು.
ವಚ್ಛಾದ ಜನತೆ ಪಡಿತರ ಚೀಟಿ ನೋಂದಣಿಗೆ ಗುಲ್ಬರ್ಗ ಇಲ್ಲವೇ ಚಿತ್ತಾಪುರಕ್ಕೆ ಹೋಗುತ್ತಿದ್ದೇವೆ. ಸುಮಾರು 40 ಕಿ.ಮೀ. ದೂರ ಹೋಗಿಬರಲು ತೊಂದರೆಯಾಗುತ್ತಿದೆ. ಪ್ರತಿ ದಿನ ವಾಹನದಲ್ಲಿ ಗುಲ್ಬರ್ಗ, ಚಿತ್ತಾಪುರಕ್ಕೆ ಅಲೆದಾಡಿ ಸಾಕಾಗಿದೆ. ಹಣದ ಜತೆಗೆ ಸಮಯ ಹಾಳಾಗುತ್ತಿದೆ. ಅಲ್ಲಿಗೆ ಹೋದರೂ ನೋಂದಣಿ ಕಾರ್ಯ ಮಂದಗತಿಯಲ್ಲಿ ನಡೆದು ವಾರಗಟ್ಟಲೇ ಹೋಗಿ ಬರುವುದು ಅನಿವಾರ್ಯವಾಗಿದೆ. ಈಗ ಬಿತ್ತನೆ ಸಮಯವಿರುವುದರಿಂದ ರೈತರಿಗೆ ಈ ಯೋಜನೆ ನಿಲುಕುದಂತಾಗಿದೆ ಎಂದು ತಿಳಿಸಿದರು.
ಮನವಿ ಆಲಿಸಿದ ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ಕೂಡಲೇ ಅಧಿಕಾರಿಗಳು ಜಾಗೃತರಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಆಯಾ ಗ್ರಾಪಂ ಕೇಂದ್ರ ಸ್ಥಾನದಲ್ಲಿ ಪಡಿತರ ಚೀಟಿ ನೋಂದಣಿಗೆ ಅನುಕೂಲ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಾಪಂ ಅಧ್ಯಕ್ಷ ಶರಣಬಸಪ್ಪ ಬಾಗೋಡಿ, ಎಪಿಎಂಸಿ ಅಧ್ಯಕ್ಷ ಶಿವಯೋಗಿ ಸಾಹು ಗುಂಡಗುರ್ತಿ, ಜಿಪಂ ಸದಸ್ಯ ರಮೇಶ ಮರಗೋಳ, ಗ್ರಾಮದ ಮುಖಂಡರಾದ ಸಿದ್ದಲಿಂಗ ಕಟ್ಟಿಮನಿ, ಸುರೇಶ ದೊಡ್ಮನಿ, ಶರಣಪ್ಪ ಮುಕರಂಬಿ, ಮುಕುಂದ ಒಡೆಯರ, ಶಿವಶರಣಪ್ಪ ಆಲೂರ, ಅಣ್ಣಪ್ಪ ಕಟ್ಟಿಮನಿ, ಶರಣಪ್ಪ ಕೂಡಳ್ಳಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement