ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಗುಲ್ಬರ್ಗ: 2012- 13ನೇ ಸಾಲಿನಲ್ಲಿ ವಿಶೇಷ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲು ಗುಲ್ಬರ್ಗ ಜಿಲ್ಲಾ ಮುನ್ನೂರ ಸಮಾಜವು ನಿರ್ಧರಿಸಿದೆ.
ಜಿಲ್ಲಾ ವ್ಯಾಪ್ತಿಯಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ದ್ವಿತೀಯ, ಡಿಪ್ಲೋಮಾ, ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಶೇ.60ಕ್ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಮುನ್ನೂರ ಸಮಾಜದ ವಿದ್ಯಾರ್ಥಿಗಳು ಜು.25ರೊಳಗಾಗಿ ಅಂಕಪಟ್ಟಿ ಪ್ರತಿ, ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಸ್ವಂತ ವಿಳಾಸ ಹೊಂದಿದ ಲಕೋಟೆಯೊಂದಿಗೆ ಕಾರ್ಯದರ್ಶಿ, ಮುನ್ನೂರ ಸಮಾಜ ಸೌಹಾರ್ದ ಪತ್ತಿನ ಸಹಕಾರಿ (ನಿ), ಕಟ್ಟಡ ಸಂಖ್ಯೆ 10-7/51/ಇ ಎನ್.ವಿ.ಸಂಸ್ಥೆಯ ಕಟ್ಟಡ, ಮೊದಲನೇ ಮಹಡಿ, ಎಸ್.ಬಿ. ಟೆಂಪಲ್ ರಸ್ತೆ ಗುಲ್ಬರ್ಗ ಇಲ್ಲಿ ಅಂಚೆ ಮೂಲಕ ಅಥವಾ ವೈಯಕ್ತಿಕವಾಗಿ ಸಲ್ಲಿಸಬಹುದು.
ಇಬ್ಬರು ವಿದ್ಯಾರ್ಥಿಗಳನ್ನು ಪುರಸ್ಕಾರಕ್ಕಾಗಿ ಆಯ್ಕೆ ಮಾಡಿ ಪುರಸ್ಕಾರ ನೀಡಿಕೆ ಸಮಾರಂಭದ ಸ್ಥಳ ಮತ್ತು ದಿನಾಂಕವನ್ನು ಸಂಬಂಧಿಸಿದವರಿಗೆ ತಿಳಿಸಲಾಗುವುದು. ಆಯ್ಕೆ ಸಮಿತಿಯ ನಿರ್ಧಾರವೇ ಅಂತಿಮವಾಗಿರುತ್ತದೆ. ಕಳೆದ ಸಾಲಿನಲ್ಲಿ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರಿಯಿಂದ ನಿವೃತ್ತಿಯಾದವರಿಗೆ ಹಾಗೂ 25 ವರ್ಷಗಳಿಗಿಂತ ಹೆಚ್ಚಿನ ದಾಂಪತ್ಯ ಜೀವನ ನಡೆಸಿದ ದಂಪತಿಗಳಿಗೆ ಸತ್ಕರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾಹಿತಿಗಾಗಿ ಮೊ. 9880460276ಕ್ಕೆ ಸಂಪರ್ಕಿಸಬಹುದು.