ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮಹಿಳೆ ಮೇಲೆ ಕಾಡು ಹಂದಿ ದಾಳಿ

Lingaraj Badiger
Updated On : 5 Jul 2013, 11:39 am

ಗುಲ್ಬರ್ಗ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಮಹಿಳೆ ಮೇಲೆ ಕಾಡು ಹಂದಿಯೊಂದು ದಾಳಿ ನಡೆಸಿದ ಘಟನೆ ಬುಧವಾರ ಹೊನ್ನಕಿರಣಗಿ ಗ್ರಾಮದಲ್ಲಿ ನಡೆದಿದೆ. ಮರೆಮ್ಮ ಗಂಡ ಭೀಮರಾಯ ಸೋಮನಾಥಹಳ್ಳಿ (28) ಎಂಬ ಮಹಿಳೆ ಮೇಲೆ ಕಾಡು ಹಂದಿ ದಾಳಿ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿರುವ ಆಕೆಯನ್ನು 108 ವಾಹನದ ಮೂಲಕ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಲಾರಿ ಟೈರ್ ಕಳವು
ಗುಲ್ಬರ್ಗ: ನಗರದ ಶೋರೂಂವೊಂದರ ಎದುರುಗಡೆಯ ಖಾಲಿ ಜಾಗದಲ್ಲಿ ನಿಲ್ಲಿಸಲಾಗಿದ್ದ ಲಾರಿಯೊಂದನ್ನು ಕದ್ದೊಯ್ದು ತಾವರಗೇರಾ ಗ್ರಾಮದಲ್ಲಿ ನಿಲ್ಲಿಸಿ ಡಿಸ್ಕ್ ಸಮೇತ ಲಾರಿಯ 6 ಟೈರ್ ಕಳವು ಮಾಡಿಕೊಂಡು ಹೋದ ಘಟನೆ ಬುಧವಾರ ನಡೆದಿದೆ. ಕಪನೂರ ಗ್ರಾಮದ ಚಾಂದಖಾನ್ ಮಹೆಬೂಬ್ ಖಾನ್ ಎಂಬುವವರಿಗೆ ಸೇರಿದ ಲಾರಿ ಇದಾಗಿತ್ತು. 45 ಸಾವಿರ ಮೌಲ್ಯದ ಟಾಯರ್ ಕಳವು ಮಾಡಿಕೊಂಡು ಹೋಗಲಾಗಿದೆ ಎಂದು ಚಾಂದಖಾನ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕಾಂಪೌಂಡ್‌ಗೆ ಹಾನಿ
ಕೆಲವು ದುಷ್ಕರ್ಮಿಗಳು ನಗರದ ಕೃಷಿ ವಿಶ್ವವಿದ್ಯಾಲಯದ ಕಾಂಪೌಂಡ್ ಒಡೆದು ಹಾನಿ ಮಾಡಿದ ಘಟನೆ ಬುಧವಾರ ನಡೆದಿದೆ. ನಿಂಗಣ್ಣ ತಂದೆ ಶರಣಪ್ಪ ಹರಸೂರ ಇತರರು ಸೇರಿ ಬುಧವಾರ ಬೆಳಗ್ಗೆ ಯಾವುದೇ ಮಾಹಿತಿ ನೀಡದೆ 40 ಮೀಟರ್ ಉದ್ದದ ಗೋಡೆಯನ್ನು ಒಡೆದು ಹಾನಿ ಮಾಡಿದ್ದು, ವಿಚಾರಿಸಲು ಹೋದ ಎಇಇ ಮತ್ತು ವಿವಿ ನಿರ್ದೇಶಕ ಅವರೊಂದಿಗೆ ಅಸಭ್ಯವಾಗಿ ವರ್ತಿಸಿ ಬೆದರಿಕೆ ಹಾಕಿದ್ದಾರೆ. ವಿವಿ ನಿರ್ದೇಶಕ ಧರ್ಮರಾಜ್ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ.
19 ಲಕ್ಷ ಮೌಲ್ಯದ ನಗ ನಾಣ್ಯ- ಕಳವು
ಗುಲ್ಬರ್ಗ: ನಗರದ ಮಿಲತ್ ನಗರದ ಮನೆಯೊಂದರ ಬಾಗಿಲು ಕೀಲಿ ಮುರಿದು ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದ 19 ಲಕ್ಷ ಮೌಲ್ಯದ ನಗ- ನಾಣ್ಯ ದೋಚಿಕೊಂಡು ಹೋದ ಘಟನೆ ಬುಧವಾರ ರಾತ್ರಿ ನಡೆದಿದೆ. ಸಲೀಂ ಮನೆಯ ಕೀಲಿ ಹಾಕಿ ಅತ್ತೆ ಮನೆಗೆ ಹೋದ ಸಂದರ್ಭದಲ್ಲಿ ಕಳ್ಳರು ಕೀಲಿ ಮುರಿದು ಒಳನುಗ್ಗಿ 14 ಸಾವಿರ ಮೌಲ್ಯದ 10 ಗ್ರಾಂ ಬಂಗಾರದ ನೆಕ್ಲೆಸ್, 5 ಸಾವಿರ ಮೌಲ್ಯದ ಬೆಳ್ಳಿಯ ಕಾಲು ಚೈನ್, ನಗದು 400 ದೋಚಿಕೊಂಡು ಹೋಗಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement