ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಯಾದಗಿರಿ ತಾಪಂ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸಕ್ಕೆ ಗೆಲವು

Lingaraj Badiger
Updated On : 5 Jul 2013, 11:45 am

ಯಾದಗಿರಿ: ಇಲ್ಲಿಯ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಸಣ್ಣಸಾಬಣ್ಣ ನಾಯಕ ಅವರ ವಿರುದ್ಧ ಗುರುವಾರ ಸದಸ್ಯರು ಮಂಡಿಸಿದ ಅವಿಶ್ವಾಸಕ್ಕೆ ಜಯವಾಗಿದೆ. ತಾಪಂ ಅಧ್ಯಕ್ಷೆ ಶ್ರೀಲಕ್ಷ್ಮಿ ಚಂಡ್ರಿಕಿ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ 25 ಸದಸ್ಯರ ಪೈಕಿ 16 ಸದಸ್ಯರು ಭಾಗವಹಿಸಿದ್ದರು. ಅವಿಶ್ವಾಸ ಪರ ಬಹುಮತ ಹೊಂದಿದ ಕಾಂಗ್ರೆಸ್‌ನ 15 ಸದಸ್ಯರು ಕೈ ಎತ್ತುವ ಮೂಲಕ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಸಭೆಯಲ್ಲಿದ್ದ ಏಕೈಕ ಬಿಜೆಪಿ ಸದಸ್ಯ ಅವಿಶ್ವಾಸದ ವಿರುದ್ಧ ಕೈ ಎತ್ತಿದರು. ಬಿಜೆಪಿಯ 8 ಸದಸ್ಯರು ಹಾಗೂ ಜೆಡಿಎಸ್‌ನ ಒಬ್ಬ ಸದಸ್ಯರು ಸಭೆಗೆ ಗೈರು ಹಾಜರಾಗಿದ್ದರು.
ಅಚ್ಚರಿ ಗೆಲವು ಸಾಧಿಸಿದ್ದರು: ತಾಪಂ.ನಲ್ಲಿ ಇಲ್ಲಿಯವರೆಗೆ ಬಹುಮತವಿಲ್ಲದಿದ್ದರೂ ಬಿಜೆಪಿಯ ಸಣ್ಣ ಸಾಬಣ್ಣ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 6 ತಿಂಗಳ ಹಿಂದೆ ನಡೆದ ಉಪಾಧ್ಯಕ್ಷ ಚುನಾವಣೆಯಲ್ಲಿ ಅಚ್ಚರಿ ಎಂಬಂತೆ ಬಿಜೆಪಿಯ ಸಣ್ಣಸಾಬಣ್ಣ ಗೆಲವು ಸಾಧಿಸಿದ್ದರು. ಕಾಂಗ್ರೆಸ್ ಸದಸ್ಯರು ನಾಮಪತ್ರ ಸಲ್ಲಿಸುವಲ್ಲಿ ವಿಳಂಬವಾದ್ದರಿಂದ ಸಣ್ಣಸಾಬಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಅವಿಶ್ವಾಸ ಮಂಡನೆ ಮಾಡಲಾಯಿತು. ಸಭೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವರಾಮ ಚವ್ಹಾಣ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಸಾವಿತ್ರಮ್ಮ ಇದ್ದರು.
ಸುರಪುರ- ಹುನಗುಂದ ರಾಜ್ಯ ಹೆದ್ದಾರಿಗೆ ಶಂಕು
ಸುರಪುರ: ಕೆಂಭಾವಿ ಮಾರ್ಗದ ಸುರಪುರ- ಹುನುಗುಂದ ರಾಜ್ಯ ಹೆದ್ದಾರಿ- 60ಕ್ಕೆ ಶಾಸಕ ರಾಜಾ ವೆಂಕಟಪ್ಪನಾಯಕ ಸಿದ್ದಾಪುರ ಹನುಮಾನ ದೇವಸ್ಥಾನದ ಹತ್ತಿರ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯಿಂದ ಈ ರಸ್ತೆಯನ್ನು 48 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಕಿಮೀ 83ರಿಂದ 129 ಕಿಮೀವರೆಗೆ ಈ ರಸ್ತೆ ಸುಧಾರಣೆಗೊಳ್ಳಲಿದೆ. ಇದರಿಂದ ನಾಗರಿಕರ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.
ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ: ರಸ್ತೆ ಕಾಮಗಾರಿ ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿಯೊಂದಿಗೆ ಮುಗಿಸಬೇಕು. ಕಾಮಗಾರಿ ಎಲ್ಲಿಯೂ ಕಳಪೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳು ಮೇಲಿಂದ ಮೇಲೆ ಉಸ್ತುವಾರಿ ಮಾಡಿ ಪರಿಶೀಲಿಸಬೇಕು. ಸರ್ಕಾರದ ಕೆಲಸ ದೇವರ ಕೆಲಸ ಎಂದು ಭಾವಿಸಿ ಪ್ರಾಮಾಣಿಕತೆಯಿಂದ ಮಾಡಬೇಕೆಂದು ಎಚ್ಚರಿಸಿದರು. ಚುನಾವಣೆ ವೇಳೆ ಜನರಿಗೆ ನೀಡಿದ ಭರವಸೆಯಂತೆ ರಸ್ತೆ ಸುಧಾರಣೆ ಹಾಗೂ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಮೊದಲಾದ್ಯತೆ ನೀಡುತ್ತೇನೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಹಕರಿಸಬೇಕೆಂದರು. ಲೋಕೋಪಯೋಗಿ ಇಲಾಖೆಯ ಎಇಇ ಟಿ.ಪ್ರಹ್ಲಾದ್ ಮಾತನಾಡಿದರು. ವಿಠ್ಠಲ ಯಾದವ್, ಮಾನಪ್ಪ ಸೂಗೂರು, ಸೂಲಪ್ಪ ಕಮತಗಿ, ಶಿವಣ್ಣ ಮಂಗೀಹಾಳ, ವೆಂಕೋಬ, ರಾಜಾ ವಾಸು, ಶರಣಗೌಡ, ಪಿಡಬ್ಲ್ಯೂಡಿ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement