ವೇಟರ್ ನಿಗೂಢ ಸಾವು
ಗುಲ್ಬರ್ಗ: ನಗರದ ಜೇವರ್ಗಿ ಕ್ರಾಸ್ ರಸ್ತೆಯಲ್ಲಿರುವ ಯಾತ್ರಿಕ ನಿವಾಸ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ವೇಟರ್, ಟೆದೇ ಹೋಟೆಲ್ ಮೇಲಿಂದ ಕೆಳಗೆ ಬಿದ್ದು ನಿಗೂಢವಾಗಿ ಮೃತಪಟ್ಟ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ.
ಆಳಂದ ತಾಲೂಕಿನ ಆಲಬಾಳ(ಬಿ) ಗ್ರಾಮದ ಮಹೇಶ ತಂದೆ ಗುಂಡಪ್ಪ (30) ಮೃತನು. ಇತ ಕಳೆದ ನಾಲ್ಕು ತಿಂಗಳಿಂದ ಯಾತ್ರಿಕ ನಿವಾಸ ಹೋಟೆಲ್‌ನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದನು.
ಮದ್ಯಪಾನ ಚಟಕ್ಕೆ ಅಂಟಿಕೊಂಡಿರುವ ಈತ ಸ್ವಲ್ಪ ಮಾನಸಿಕವಾಗಿ ನೊಂದಿದ್ದ. ಗುರುವಾರ ಬೆಳಗಿನ ಜಾವ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿದ್ದು, ಇದು ಆತ್ಮಹತ್ಯೆ ಅಲ್ಲ. ಯಾರೋ ಕೆಳಗೆ ನೂಕಿ ಕೊಲೆ ಮಾಡಿದ್ದಾರೆ ಎಂದು ಮೃತನ ತಂದೆ ಗುಂಡಪ್ಪ ಸಂಶಯ ವ್ಯಕ್ತಪಡಿಸಿ ಈ ಕುರಿತು ತನಿಖೆ ನಡೆಸುವಂತೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಅಶೋಕ ನಗರ ಠಾಣೆಯ ಪಿಐ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
--
ಪರಿಷ್ಕೃತ ವೇಳಾಪಟ್ಟಿ
ಗುಲ್ಬರ್ಗ: ಪ್ರೌಢಶಾಲಾ ಮುಖ್ಯ ಗುರುಗಳ ತತ್ಸಮಾನ ವೃಂದದ ಪರಿಷ್ಕೃತ ವರ್ಗಾವಣೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ಜು.6 ಹಾಗೂ 7ರಂದು ನಡೆಯುವ ಪ್ರೌಢಶಾಲಾ ಮುಖ್ಯಗುರುಗಳ ತತ್ಸಮಾನ ವೃಂದದ ಘಟಕ, ಘಟಕದೊಳಗಿನ ವರ್ಗಾವಣೆಗಳ ಕ್ರಮ ಸಂಖ್ಯೆ 1ರಿಂದ 54ರವರೆಗಿನ ಗ್ರೂಪ್ ಬಿ ವೃಂದದ ಅಧಿಕಾರಿಗಳ ಕೌನ್ಸೆಲಿಂಗ್ ಜುಲೈ 6ರಂದು ಒಂದೇ ದಿನ ನಡೆಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಸೈಯದ್ ಅಬ್ದುಲ್ ರಬ್ ಅವರು ತಿಳಿಸಿದ್ದಾರೆ.