ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪರಿಹಾರ ಕಲ್ಪಿಸಲು ಜಿಲ್ಲಾಧಿಕಾರಿಗೆ ಭೂ ಸಂತ್ರಸ್ತರ ಒತ್ತಾಯ

Mainashree
Updated On : 6 Jul 2013, 11:50 am

ಕನ್ನಡಪ್ರಭ ವಾರ್ತೆ  ಯಾದಗಿರಿ  ಜು.5
ಶಹಾಪುರ ತಾಲೂಕಿನ ಹುರುಸುಗುಂಡಗಿ ಬಳಿಯ ಸನ್ನತಿ ಬ್ಯಾರೇಜ್‌ನ ಹಿನ್ನೀರಿನಿಂದ ಮುಳುಗಡೆಯಾದ ಹುರಸಗುಂಡಗಿ, ಶಿರವಾಳ, ಸನ್ನತಿ, ಕೊಲ್ಲೂರು ಇನ್ನಿತರ ಗ್ರಾಮಗಳ ರೈತರ ಜಮೀನು ದರ ವಿಳಂಬವಾದ ಬಗ್ಗೆ ವೈಜ್ಞಾನಿಕ ದರ ನಿಗದಿ ಮಾಡುವಂತೆ ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಶಾಸಕ ಗುರುಪಾಟೀಲ್ ನೇತೃತ್ವದಲ್ಲಿ ರೈತರು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.
  ಬ್ಯಾರೇಜು ಹಿನ್ನೀರಿನಲ್ಲಿ ಮುಳುಗಡೆಯಾದ ಗ್ರಾಮಗಳ ರೈತರ ಭೂಮಿಗಳು ಬಹಳ ಫಲವತ್ತಾದ ಜಮೀನುಗಳಾಗಿವೆ. ಜಮೀನುಗಳಲ್ಲಿ ವಾಣಿಜ್ಯ ಬೆಳೆಗಳಾದ ಹತ್ತಿ, ಕಬ್ಬು, ಮೆಣಸಿನಕಾಯಿ, ಅರಶಿಣ, ಬತ್ತ ಇನ್ನಿತರ ಬೆಳೆಗಳನ್ನು ಬೆಳೆಯಲಾಗುತ್ತದೆ. ಒಂದು ವರ್ಷದಲ್ಲಿ ಎರಡು ಬೆಳೆಗಳನ್ನು ತೆಗೆಯಲಾಗುತ್ತದೆ. ಪ್ರತಿ ಎಕರೆಗೆ ಒಂದು ಲಕ್ಷದಿಂದ ಒಂದೂವರೆ ಲಕ್ಷವರೆಗೂ ಉತ್ಪನಗಳನ್ನು ತೆಗೆಯಲಾಗುತ್ತದೆ.
ಪರಿಹಾರಧನಕ್ಕೆ ಒತ್ತಾಯ: ಆದ್ದರಿಂದ ಮುಳುಗಡೆಯಾಗುವ ಎಲ್ಲ ಜಮೀನುಗಳಿಗೆ ಪ್ರತಿ ಎಕರೆ ಒಣ ಬೇಸಾಯಕ್ಕೆ 12 ಲಕ್ಷ ಮತ್ತು ನೀರಾವರಿ ಜಮೀನುಗೆ 18 ಲಕ್ಷ ಪರಿಹಾರಧನ ನೀಡಬೇಕೆಂದು ಶಾಸಕ ಗುರುಪಾಟೀಲ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಒತ್ತಾಯಿಸಿದರು.
  ಸಂತ್ರಸ್ತ ರೈತರಾದ ಸಿದ್ದನಗೌಡ ಪೊಲೀಸ್‌ಪಾಟೀಲ, ಬಾಲಾಜಿ ಹುರುಸುಗುಂಡಿಗಿ, ಕೃಷ್ಣರಾವ್ ಶಿರವಾಳ, ಬಸವರಾಜ ಇಟಗಿ ಇತರರು ಇದ್ದರು.
ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಶಾಸಕ
ಗ್ರಾಮೀಣ ಭಾಗದಲ್ಲಿ ಹಲವಾರು ಸಮಸ್ಯೆಗಳು ಜ್ವಲಂತವಾಗಿ ಉಳಿದಿವೆ. ಎಲ್ಲವನ್ನು ಹಂತ ಹಂತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಶಾಸಕ ಗುರು ಪಾಟೀಲ ಶಿರವಾಳ ಹೇಳಿದರು. ತಾಲೂಕಿನ ಸಲಾದಪುರದಲ್ಲಿ ಸುವರ್ಣ ಗ್ರಾಮ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ನಾನೊಬ್ಬ ಜನರ ಸಾಮಾನ್ಯ ಸೇವಕ ಎಂದು ತಿಳಿದು ಜನತೆ ನಿರ್ಭಿಡೆಯಿಂದ ನಿಮ್ಮ ಸಮಸ್ಯೆಗಳು ತಿಳಿಸಬೇಕು. ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
 ಮುಖಂಡ ಅಮಾತೆಪ್ಪ ಕಂದಕೂರ, ಮಲ್ಲಣ್ಣ ಮಡ್ಡಿ, ಭೀಮಯ್ಯಗೌಡ ಕಟ್ಟಿಮನಿ, ಕರೆಪ್ಪ ಸಲಾದಪುರ, ಮೋಹನರಡ್ಡಿ ಪಾಟೀಲ, ಸೈಯದ್ ಜಾಫರ್, ವಿಶ್ವನಾಥ ರಡ್ಡಿ, ರವಿ ಮಡಿವಾಳ್ಕರ್, ಮಲ್ಲಪ್ಪ ಅರಸೂರ, ದೇವಪ್ಪ ಪೂಜಾರಿ, ಸಾಹಿಬಣ್ಣ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement