ಸಾಯಿಬಣ್ಣ ಪುರ್ಲೆಗೆ ಕರ್ನಾಟಕ ಚೇತನ ಪ್ರಶಸ್ತಿ ಪ್ರದಾನ
ಸುರಪುರ: ಬೆಂಗಳೂರಿನ ಪತ್ರಕರ್ತರ ವೇದಿಕೆ ಮತ್ತು ಕರ್ನಾಟಕ ಮೀಡಿಯಾ, ನ್ಯೂಸ್ ಸೆಂಟರ್‌ನವರು ಶಿಕ್ಷಣ ಕ್ಷೇತ್ರದಲ್ಲಿನ ಗಣನೀಯ ಸಾಧನೆಯನ್ನು ಗಮನಿಸಿ ನೀಡಲಾಗುವ 2013- 14ನೇ ಸಾಲಿನ ಕರ್ನಾಟಕ ಚೇತನ ಪ್ರಶಸ್ತಿಯನ್ನು ರಂಗಂಪೇಟೆಯ ಸುದೀಪ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಾಯಿಬಣ್ಣ ಪುರ್ಲೆಯವರಿಗೆ ನೀಡಿ ಗೌರವಿಸಿದೆ.
ಬೆಂಗಳೂರಿನ ನಯನ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರು ಸಾಹಿಬಣ್ಣ ಪುರ್ಲೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ನಂದವಾಡಗಿಯ ಮಹಾಂತಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸಮಾರಂಭ ಉದ್ಘಾಟಿಸಿದರು. ಕಣ್ಣುಮುಚ್ಚಾಲೆ ಪತ್ರಿಕೆ ಸಂಪಾದಕ ವೈ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಚಿತ್ರನಟಿ ಸಿಂಧು, ಪ್ರಮುಖರಾದ ಎಂ.ಜಿ. ಸೋಮಶೇಖರ, ಗುಲ್ಬರ್ಗ ಕಸಾಪ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರು, ರಾಘವೇಂದ್ರ ಗಂಗಾವತಿ, ಜೆ.ಎಸ್. ಗೋನಾಲ ಇತರರಿದ್ದರು.