ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂದು ಲಾರಿ ಮುಷ್ಕರಕ್ಕೆ ಕರೆ

Mainashree
Updated On : 7 Jul 2013, 11:42 am

ಗುಲ್ಬರ್ಗ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಲಾರಿ ಮತ್ತು ಟಿಪ್ಪರ್ ಮಾಲೀಕರು ಜು.7ರಂದು ನಗರದಾದ್ಯಂತ ಲಾರಿ, ಟಿಪ್ಪರ್‌ಗಳು ಆಯಾ ಸ್ಥಳದಲ್ಲೇ(ಔಟರ್ ರಿಂಗ್‌ರೋಡ್) ನಿಲ್ಲಿಸುವ ಮೂಲಕ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.
ರಾಜ್ಯವ್ಯಾಪಿ ಮರಳು ಲಾರಿ, ಟಿಪ್ಪರ್ ಸಾಗಾಣಿಕೆಯ ವಾಹನಗಳಿಗೆ 7ರಂದು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮುಷ್ಕರ ನಡೆಸಲಾಗುತ್ತಿದೆ ಎಂದು ಮರಳು ಸಾಗಾಣಿಕೆ ಲಾರಿ, ಟಿಪ್ಪರ್ ಮಾಲೀಕರ ಸಂಘದ ಕಾರ್ಯದರ್ಶಿ ಬಿ.ಎಂ. ರವಿಕುಮಾರ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಮರಳು ಸಾಗಾಣಿಕೆ ಪರವಾನಗಿಯನ್ನು ನೂತನ ಮರಳು ನೀತಿಯನ್ನು ಸಮರ್ಪಕವಾಗಿ ಜಾರಿಗೆ ತರದೇ ಲಾರಿ ಮಾಲೀಕರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಸ್ವಉದ್ಯೋಗಕ್ಕೆ ಲಾರಿ, ಟಿಪ್ಪರ್ ಮರಳು ಸಾಗಾಣಿಕೆಯನ್ನು ನಂಬಿಕೊಂಡು ಸಾವಿರಾರು ಮಾಲೀಕರು, ಸಹಸ್ರಾರು ಕಾರ್ಮಿಕರು ಕೆಲಸವಿಲ್ಲದೇ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕುವ ಪರಿಸ್ಥಿತಿ ಬಂದೊದಗಿದೆ ಎಂದು ತಿಳಿಸಿದ್ದಾರೆ.
ಅಧಿಕಾರಿಗಳ ಕಿರುಕುಳ: ಈ ಮುಂಚೆ ಭೂ ಮತ್ತು ಗಣಿ ಇಲಾಖೆಯ ಮೂಲಕ ಮರಳು ರಾಜಧನ(ರಾಯಲ್ಟಿ) ಪಡೆದುಕೊಂಡು ಮುಕ್ತ ಸಾಗಾಣಿಕೆಗೆ ಅವಕಾಶವಿತ್ತು. 2011ರಲ್ಲಿ ನೂತನ ಮರಳು ನೀತಿಯನ್ವಯ ವಿವಿಧ ಇಲಾಖೆಗಳ ಸುಪರ್ದಿಯಲ್ಲಿ ಮರಳು ಸಾಗಾಣಿಕೆಗೆ ಸಮರ್ಪಕವಾಗಿ ಪರ್ಮಿಟ್ ನೀಡದೇ ಅಕ್ರಮ ಸಾಗಾಣಿಕೆಯಿಂದ ಅಧಿಕಾರಿಗಳು ತನಿಖಾ ನೆಪದಲ್ಲಿ ಕಿರುಕುಳ ನೀಡುತ್ತಿರುವುದನ್ನು ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸಂಘದ ರಾಜ್ಯ ಘಟಕ ಈ ಮುಷ್ಕರಕ್ಕೆ ಕರೆ ನೀಡಿದೆ ಎಂದು ರವಿಕುಮಾರ್ ತಿಳಿಸಿದ್ದಾರೆ. ಮುಷ್ಕರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಾರಿ ಮತ್ತು ಟಿಪ್ಪರ್ ಮಾಲೀಕರು ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement