'ಎಸ್ಸಿಪಿ, ಟಿಎಸ್ಪಿ'ಯಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ
ಯಾದಗಿರಿ: ಗುರಮಠಕಲ್ ಮತಕ್ಷೇತ್ರದಲ್ಲಿ 2012-13ನೇ ಸಾಲಿನ ಎಸ್ಸಿಪಿ,ಟಿಎಸ್ಪಿ (ವಿಶೇಷ ಘಟಕ) ಯೋಜನೆಯಡಿ ಕಾಮಗಾರಿಗಳನ್ನು ಟೆಂಡರ್ ಕರೆಯದೇ ನೇರವಾಗಿ ತುಂಡು ಗುತ್ತಿಗೆ ಮೂಲಕ ನಿರ್ವಹಿಸಿ ಅವ್ಯವಹಾರ ನಡೆಸಲಾಗಿದೆ ಎಂದು ಕ್ಷೇತ್ರದ ಗೌಡಗೇರಾ ಗ್ರಾಮದ ಮಲ್ಲಯ್ಯ ನಾಯಕ್ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಸರ್ಕಾರ ಸುಮಾರು 1 ಕೋಟಿ ಬಿಡುಗಡೆ ಮಾಡಿದೆ. ಆದರೆ ಅಧಿಕಾರಿಗಳು ಈ ಯೋಜನೆಯಲ್ಲಿ ಕಾಮಗರಿಗಳ ಟೆಂಡರ್ ಕರೆಯದೆ, ನೇರವಾಗಿ ನಿರ್ವಹಿಸುವ ಮೂಲಕ ಅವ್ಯವಹಾರ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಆರೋಪಿಸಿದ್ದಾರೆ. ಅವ್ಯವಹಾರದಲ್ಲಿ ಭಾಗಿಯಾದ ಎಇಇ ಮೇಲೆ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.