ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮೂಲ ಸೌಲಭ್ಯಕ್ಕೆ ಆಗ್ರಹಿಸಿ ರಸ್ತೆ ತಡೆ

Mainashree
Updated On : 7 Jul 2013, 11:42 am

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಜು.6
ನಗರಕ್ಕೆ ಮೂಲಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ಸಮರ ಸೇನೆಯ ಕಾರ್ಯಕರ್ತರು ಶುಕ್ರವಾರ ಮುಸ್ಲಿಂ ಚೌಕ್‌ನಲ್ಲಿ ರಸ್ತೆತಡೆ ಚಳವಳಿ ನಡೆಸಿದರು.
ಮುಸ್ಲಿಮರ ಹಬ್ಬವಾದ ರಂಜಾನ್ ಆರಂಭವಾಗುವ ಮುಂಚೆ ಮಿಸ್ಕೀನ್ ಶಹಾಬಾಬಾ ದರ್ಗಾದ ಸುತ್ತಮುತ್ತಲು ಸ್ವಚ್ಛತೆ ಮಾಡಬೇಕು. ಚರಂಡಿ, ರಸ್ತೆ, ಬೀದಿದೀಪಗಳು ಕಲ್ಪಿಸಿ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಾರ್ಡ್‌ಗಳಲ್ಲಿ ಮತ್ತು ನಗರಾದ್ಯಂತ ಚರಂಡಿಗಳನ್ನು ನಿರ್ಮಾಣ ಮಾಡಬೇಕು ಮತ್ತು ಚರಂಡಿಗಳ ಸ್ವಚ್ಛ ಮಾಡಬೇಕೆಂದು ಆಗ್ರಹಿಸಿದರು.
ಪಾಲಿಕೆಯ ಎಲ್ಲ 55 ವಾರ್ಡ್‌ಗಳಲ್ಲಿ ಕಸ ಸಂಗ್ರಹಿಸುವ ಕಂಟೇನರ್‌ಗಳನ್ನು ಕೂಡಲೇ ಒದಗಿಸುವುದು ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಮಂಜುನಾಥ ನಾಲವಾಕರ್, ನಾಗನಾಥ ನಾಲವಾರಕರ್, ಮಹ್ಮದ್ ಸಾದೀಕ ಅಲಿ, ಅರವಿಂದ ನಾಟಿಕರ್, ಶರಣು ಹೊಸಮನಿ, ಮಹ್ಮದ್ ಯುಸುಫ್, ಅಜರ್ ಮುಬಾಕ್ ಸೇರಿದಂತೆ ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement