ಅಧಿಕಾರಿಗಳೊಂದಿಗೆ ಸಮೀಕ್ಷೆ
ಗುಲ್ಬರ್ಗ: ಮುಂಬೈ ಮಧ್ಯೆ ರೇಲ್ವೆ ಪ್ರಧಾನ ವ್ಯವಸ್ಥಾಪಕ ಬಿ.ಪಿ. ಖಾರೆ ಅವರು ವಿವಿಧ ಅಧಿಕಾರಿಗಳ ತಂಡದೊಂದಿಗೆ ಶನಿವಾರ ವಿಶೇಷ ರೇಲಿನ ಮೂಲಕ ಖುದ್ದಾಗಿ ಆಗಮಿಸಿ ಎರಡು ಗಂಟೆಗೂ ಹೆಚ್ಚು ಕಾಲ ಹೊಸದಾಗಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಸಮೀಕ್ಷೆ ನಡೆಸಿದರು.
ಗುಲ್ಬರ್ಗ, ವಾಡಿ ಹಾಗೂ ಶಹಾಬಾದ್ ರೈಲು ನಿಲ್ದಾಣ, ಗೋದಾಮುಗಳು ಹಾಗೂ ಅದರ ಸುತ್ತಮುತ್ತಲಿನ ಪ್ರದೇಶವನ್ನು ಪರಿಶೀಲನೆ ನಡೆಸಿ ಮಾಡಬೇಕಾದ ಹೊಸ ಕಾಮಗಾರಿ ಬಗ್ಗೆ ಅಧಿಕಾರಿಗಳಿಗೆ ವಿವರಿಸಿದರು. ನಿಲ್ದಾಣದ ವಿಸ್ತರಣೆ, ಸ್ವಯಂ ಚಾಲಿತ ಮೆಟ್ಟಿಲುಗಳು (ಎಸ್ಕಲೇಟರ್) ಹಾಗೂ ಮತ್ತಷ್ಟು ಪ್ಲಾಟ್ ಪಾರ್ಮ ನಿರ್ಮಿಸುವುದು ಸೇರಿದಂತೆ ಇನ್ನು ಅನೇಕ ಸೌಲಭ್ಯಗಳು ಗುಲ್ಬರ್ಗ ರೇಲ್ವೆ ನಿಲ್ದಾಣದಲ್ಲಿ ಶೀಘ್ರದಲ್ಲಿ ಪ್ರಯಾಣಿಕರಿಗೆ ಲಭ್ಯವಾಗಲಿವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.