ಕುಡಿವ ಅಮಲಿನಲ್ಲಿ ಆತ್ಮಹತ್ಯೆ
ಚಿಂಚೋಳಿ: ಐನೋಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸಿರಾಜುದ್ದೀನ್ ತಂದೆ ಮಸ್ತಾನಸಾಬ್ ನಾವದಗಿ(38) ಮೃತನು. ಕುಡಿದ ಅಮಲಿನಲ್ಲಿ ಮನೆಯಲ್ಲಿಯೇ ಜು.1ರಂದು ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ತೀವ್ರವಾಗಿ ಗಾಯಗೊಂಡಿದ್ದ ಆತನಿಗೆ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳತನಕ್ಕೆ ಯತ್ನ
ಗುಲ್ಬರ್ಗ: ಸಂತೋಷ ಕಾಲೋನಿಯಲ್ಲಿರುವ ಶಾಂಗ್ರಿಯಾ ಅಪಾರ್ಟ್‌ಮೆಂಟ್ ಪಕ್ಕದ ಕಟ್ಟಡದಲ್ಲಿ ನಾಲ್ವರು ಕಳ್ಳರು ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿದ ಘಟನೆ ಇತ್ತೀಚೆಗೆ ನಡೆದಿದೆ. ಸೆಕ್ಯೂರಿಟಿ ಗಾರ್ಡ್ ಮಲ್ಲಿಕಾರ್ಜುನ ಯಾದಗಿರಿ ಎಂಬಾತನಿಗೆ ಜೀವ ಬೆದರಿಕೆ ಹಾಕಿ ಆತನ ಬಳಿಯಿಂದ 150 ಮತ್ತು ಒಂದು ಮೊಬೈಲ್ ಕಸಿದು ಕಟ್ಟಿಹಾಕಿದ್ದಾರೆ. ನಂತರ ಕಟ್ಟಡದ ಮನೆಗಳ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸುತ್ತಿದ್ದಾಗ ಅವಿನಾಶ ಎಂಬವರು ಕಳ್ಳರು ಎಂದು ಚೀರಾಡಿದಾಗ ಪರಾರಿಯಾಗಿದ್ದಾರೆ.