ಮದ್ಯವ್ಯಸನಿ ಯುವಕ ಸಾವು
ಚಿಂಚೋಳಿ: ತಾಲೂಕಿನ ಸುಲೇಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಕುಡಹಳ್ಳಿಯಲ್ಲಿ ಮುಂದಿನ ವಾರ ಮದುವೆಯಾಗಬೇಕಿದ್ದ ಯುವಕನೊಬ್ಬ ಅತಿಯಾಗಿ ಮದ್ಯ ಸೇವಿಸಿ ಮೃತಪಟ್ಟಿದ್ದಾನೆ ಎಂದು ಸುಲೇಪೇಟ್ ಪಿಎಸ್ಐ ಸೋಮಶೇಖರ ಕೆಂಚರೆಡ್ಡಿ ತಿಳಿಸಿದ್ದಾರೆ.
ಗ್ರಾಮದ ನಾಗೇಶ ಕುಪ್ಪಣ್ಣ ಪೂಜಾರಿ(21) ಮೃತನು. ಠಾಣೆಯ ಪಕ್ಕದಲ್ಲಿರುವ ಗುರು ನಂಜೇಶ್ವರ ಮಠದಲ್ಲಿ ಮದ್ಯ ಸೇವಿಸಿ ರಾತ್ರಿ ಮಲಗಿದಾಗ ಅತಿಯಾದ ತಣ್ಣನೆ ಗಾಳಿಯಿಂದಾಗಿ ಮೃತಪಟ್ಟಿದ್ದಾನೆ. ಮೃತನ ಮದುವೆ ಮುಂದಿನ ವಾರ ನಡೆಯಲಿರುವುದರಿಂದ ಮದುವೆ ಆಮಂತ್ರಣ ಪತ್ರಿಕೆಗಳನ್ನು ನೀಡುವುದಕ್ಕಾಗಿ ಗ್ರಾಮಗಳಿಗೆ ಹೋಗಲು ಹೆಚ್ಚಿನ ಹಣ ತೆಗೆದುಕೊಂಡು ಹೋಗಿ ಹೆಚ್ಚಿನ ಮದ್ಯ ಸೇವಿಸಿ ಮಠದಲ್ಲಿಯೇ ಮೃತಪಟ್ಟಿದ್ದಾನೆ.
ಈ ಕುರಿತು ಮೃತನ ತಾಯಿ ರಾಯಮ್ಮ ಕುಪ್ಪಣ್ಣ ಪೂಜಾರಿ ಕುಡಹಳ್ಳಿ ಅವರು ನೀಡಿದ ದೂರಿನ ಮೇರೆಗೆ ಸುಲೇಪೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.