ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಿವಿಧೆಡೆ ಇಂದು ವಿದ್ಯುತ್ ಸ್ಥಗಿತ

Lingaraj Badiger
Updated On : 9 Jul 2013, 11:05 am

ಜೇವರ್ಗಿ: ತಾಲೂಕಿನ ಮಂದೇವಾಲದಿಂದ ಯಡ್ರಾಮಿಗೆ ಹೊಸ ಸ್ಟೇಷನ್ ವಿದ್ಯುತ್ ಕಾಮಗಾರಿ ನಡೆಯುತ್ತಿರುವುದರಿಂದ  ಮಂದೇವಾಲ, ನೆಲೋಗಿ, ಜೇರಟಗಿಯಲ್ಲಿ ಜು. 9 ವಿದ್ಯುತ್ ಸ್ಥಗಿತಗೊಳ್ಳಲಿದೆ ಎಂದು ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಿವಕುಮಾರ ತಿಳಿಸಿದ್ದಾರೆ. ಮಂದೇವಾಲ ಗ್ರಾಮದಲ್ಲಿರುವ 110 ಕೆ.ವಿ ಮತ್ತು ನೆಲೋಗಿ 43 ಕೆ.ವಿ. ಯಿಂದ ಹೊರ ಹೋಗುವ ಎಲ್ಲ 11 ಕೆ.ವಿ ವಿದ್ಯುತ್ ಫೀಡರ್‌ಗಳ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಅಂದು ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸ್ಥಗಿತಗೊಳ್ಳಲಿದ್ದು, ಮಂದೇವಾಲ, ಜೇರಟಗಿ, ನೆಲೋಗಿ ಗ್ರಾಮಗಳ ಜನರು ಸಹಕರಿಸುವಂತೆ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
ಇಂದು ಸಂಜೆ ಮೌನ ಮೆರವಣಿಗೆ
ಗುಲ್ಬರ್ಗ: ಬೌದ್ಧಗಯಾ ಮಹಾಬೋಧಿ ಮಹಾ ವಿಹಾರದ ಮೇಲೆ ಆದ ವಿದ್ವಂಸಕ ಕೃತ್ಯ ಖಂಡಿಸಿ ತ್ರಿರತ್ನ ಬೌದ್ಧ ಮಹಾ ಸಂಘ ಗುಲ್ಬರ್ಗ ವತಿಯಿಂದ ಜು. 9ರಂದು ಸಂಜೆ 6.30 ಗಂಟೆಗೆ ನಗರದ ಡಾ. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೇಣದ ಬತ್ತಿ ಹಿಡಿದು ಮೌನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ  ಎಂದು ಹನುಮಂತ ಬೋಧನಕರ್, ನಾಗೇಂದ್ರ ಕಟ್ಟಿಮನಿ ಮತ್ತು ಬೋಧಿರಾಜ್ ತಿಳಿಸಿದ್ದಾರೆ.
ನಾಳೆ ಧರಣಿ
ಗುಲ್ಬರ್ಗ: ಇದೇ 12 ರಂದು ಆರಂಭಗೊಳ್ಳಲಿರುವ ವಿಧಾನಸಭೆ ಅಧಿವೇಶನದಲ್ಲಿ ನ್ಯಾಯಾಧೀಶ ಎ.ಜೆ. ಸದಾಶಿವ ಅವರ ಆಯೋಗ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜು.10ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಹಮ್ಮಿಕೊಂಡಿದೆಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾನೇಶ ಬಿಲ್ಲವ ಪ್ರಕಟಣೆ ಮೂಲಕ ಕೋರಿದ್ದಾರೆ.
ನಾಳೆ  ಖರ್ಗೆ ಪ್ರವಾಸ
ಗುಲ್ಬರ್ಗ: ಕೇಂದ್ರ ರೇಲ್ವೆ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಜುಲೈ 10ರಂದು 7.30 ಗಂಟೆಗೆ ಗುಲ್ಬರ್ಗಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು. ಜುಲೈ 11ರಂದು ಬೆಳಗ್ಗೆ 10 ಗಂಟೆಗೆ ಡಿಸಿಸಿ ಕಚೇರಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು. ನಂತರ ಸಂಜೆ 4 ಗಂಟೆಗೆ ರಸ್ತೆ ಮೂಲಕ ಹೈದ್ರಾಬಾದಿಗೆ ಪ್ರಯಾಣಿಸುವರು. ಪುನಃ ಜುಲೈ 14ರಂದು ಬೆಳಗ್ಗೆ 5.30 ಗಂಟೆಗೆ ಗುಲ್ಬರ್ಗಕ್ಕೆ ಆಗಮಿಸಿ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಾಸ್ತವ್ಯ ಮಾಡುವರು. ಜು.15ರಂದು ಮಧ್ಯಾಹ್ನ 12 ಗಂಟೆಗೆ ರಸ್ತೆ ಮೂಲಕ ಹೈದ್ರಾಬಾದಿಗೆ ಪ್ರಯಾಣಿಸುವರು.
11ರಂದು ಸಭೆ
ಚಿತ್ತಾಪುರ: ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಜು.11ರಂದು ಬೆ.10.30ಕ್ಕೆ ಚಿತ್ತಾಪುರ ನಗರ ಘಟಕದ ಆಯ್ಕೆ ಕುರಿತಾಗಿ ಸಭೆ ಕರೆಯಲಾಗಿದೆ. ಘಟಕದ ಅಧ್ಯಕ್ಷ ನೇಮಕಾತಿ ನಡೆಯುತಿದ್ದು ಮುಖಂಡರು, ಕಾರ್ಯಕರ್ತರು ಸಲಹೆ ನೀಡಬೇಕೆಂದು ಶಶಿಕಾಂತ ಪಾಟೀಲ್ ಬೆಳಗುಂಪಾ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement