'ಅಧಿಕಾರಿ ಮುಂದುವರಿಸಿ'
ಮನ್ನಳ್ಳಿ: ಬೀದರ್ ತಾಲೂಕಿನ ಮನ್ನಳ್ಳಿ ಗ್ರಾಮದಲ್ಲಿ ಜೆಸ್ಕಾಂನ ಎಎಲ್ಎಂ ವೀರಶೆಟ್ಟಿ ಪಾಂಚಾಳ ಅವರ ಸೇವೆಯನ್ನು ಅಲ್ಲಿಯೇ ಮುಂದುವರಿಸಬೇಕೆಂದು ಡಿಎಸ್ಎಸ್ ಗ್ರಾಮ ಶಾಖೆ ಆಗ್ರಹಿಸಿದೆ.
ಈ ಕುರಿತು ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಜೆಸ್ಕಾಂ ಅಧಿಕಾರಿಗಳಿಗೆ ನೀಡಿ, ಸುಮಾರು ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸುತ್ತಿರುವ ವೀರಶೆಟ್ಟಿ ಪಾಂಚಾಳ ಅವರನ್ನು ಕೆಲವರು ಇಲ್ಲಿಂದ ವರ್ಗಾವಣೆ ಮಾಡಬೇಕೆಂದು ದೂರು ಸಲ್ಲಿಸಿದ್ದಾರೆ. ಆದರೆ ಇವರು ಗ್ರಾಮದ ಸಮಸ್ಯೆಯನ್ನು ಕೂಡಲೇ ನಿವಾರಿಸಿ ಎಲ್ಲರ ಮನಗೆದ್ದಿದ್ದಾರೆ. ಆದ್ದರಿಂದ ಯಾರದೋ ಮಾತು ಕೇಳಿ ಇವರನ್ನು ಇಲ್ಲಿಂದ ವರ್ಗಾವಣೆ ಮಾಡಬಾರದು ಎಂದು ಸಮಿತಿಯ ವಿಶ್ವನಾಥ ಶಿವಾರೆ, ಜೀವನಕುಮಾರ, ಉತ್ತಮಕುಮಾರ ಭಂಡಾರೆ, ರಮೇಶ ತಮ್ಮಣ್ಣ, ರಾಜಕುಮಾರ ಶಿವಾರೆ ಮತ್ತಿತರರು ಕೋರಿದ್ದಾರೆ.