ದಿನಾಚರಣೆ; ನಾಳೆ ವಿವಿಧ ಸ್ಪರ್ಧೆಗಳು
ಗುಲ್ಬರ್ಗ: ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಜು.11ರಂದು ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ವಿವಿಧ ಸ್ಫರ್ಧೆಗಳನ್ನು ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 10.30ಕ್ಕೆ ನಿಸರ್ಗ ಮತ್ತು ಪರಿಸರ ಜನಸಂಖ್ಯಾ ಸ್ಫೋಟ ಮತ್ತು ಅದರಿಂದ ನಗರ ಜೀವನದ ಮೇಲಾಗುವ ಪರಿಣಾಮ ಕುರಿತು ಮತ್ತು ಜನಸಂಖ್ಯಾ ಸ್ಫೋಟ- ನೈಸರ್ಗಿಕ ಸಂಪನ್ಮೂಲಗಳ ಮೇಲಾಗುವ ಒತ್ತಡ ಕುರಿತು 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 12.15ಕ್ಕೆ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜನಸಂಖ್ಯಾ ಬೆಳವಣಿಗೆ ಮತ್ತು ದೇಶದ ಆರ್ಥಿಕ ಅಭಿವೃದ್ಧಿ ವಿಷಯ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಮಧ್ಯಾಹ್ನ 3ಕ್ಕೆ ಜನಸಂಖ್ಯಾ ಸ್ಫೋಟ ಮತ್ತು ಅದರ ಪರಿಣಾಮದ ಕುರಿತು ಉಪನ್ಯಾಸ, ಮಧ್ಯಾಹ್ನ 3.45ಕ್ಕೆ ಮುಕ್ತ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿವರಕ್ಕೆ 220608ಗೆ ಸಂಪರ್ಕಿಸಬಹುದು.
ತಿಂಗಳಿಂದ ಗ್ರಾಮಕ್ಕೆ ಬಾರದ ಪಾಲಕ; ದೂರು
ಚಿತ್ತಾಪುರ: ತಾಲೂಕಿನ ಕಲಗುರ್ತಿ ಹಾಗೂ ಮಲಘಾಣ ಗ್ರಾಮ ಪಾಲಕರು ಒಂದು ತಿಂಗಳಿಂದ ಗ್ರಾಮಕ್ಕೆ ಬಂದಿಲ್ಲ ಎಂದು ಕೋರವಾರ ಗ್ರಾಪಂ ಮಾಜಿ ಅಧ್ಯಕ್ಷ ಮಸ್ತಾನಸಾಬ್ ಕೊರವಿ ದೂರಿದ್ದಾರೆ. ಕಾಳಗಿ ವಿಶೇಷ ತಹಸೀಲ್ದಾರರಿಗೆ ಮನವಿ ಮಾಡಲಾಗಿ ಅವರು ಸದ್ಯ ರವಿ ಎಂಬ ಗ್ರಾಮ ಪಾಲಕರನ್ನು ತಾತ್ಕಾಲಿಕ ನಿಯೋಜನೆ ಮಾಡಿ ರೈತರ ಕೆಲಸ ಕಾರ್ಯಗಳು ಮಾಡಲು ಸೂಚಿಸಿದ್ದಾರೆ.