ಬೈಕ್ಗಳ ಡಿಕ್ಕಿ: ವ್ಯಕ್ತಿ ಸಾವು
ಗುಲ್ಬರ್ಗ: ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಒಬ್ಬ ಸವಾರ ಸಾವಿಗೀಡಾದ ಘಟನೆ ಮಂಗಳವಾರ ರಾತ್ರಿ 8ರ ಸುಮಾರಿಗೆ ಕಮಲಾಪುರದ ಇಸ್ಮಾಯಿಲ್ ದಾಬಾದ ಬಳಿ ನಡೆದಿದೆ.
ಆಂಧ್ರ ಪ್ರದೇಶದ ಜಿಹಿರಾಬಾದ್ ತಾಲೂಕಿನ ಚರಕಪಲ್ಲಿ ಗ್ರಾಮದ ಜಗನ್ನಾಥರೆಡ್ಡಿ ತಂದೆ ವೀರಾರೆಡ್ಡಿ(45) ಮೃತನು. ಜಯವಂತರೆಡ್ಡಿ ಮತ್ತು ಜಗನ್ನಾಥರೆಡ್ಡಿ ಇಬ್ಬರು ಹುಮನಾಬಾದ್ ಗುಲ್ಬರ್ಗ ರಾಷ್ಟ್ರೀಯ ಹೆದ್ದಾರಿ 218ರ ರಸ್ತೆಯ ಮೂಲಕ ಕಮಲಪುರ ಮಾರ್ಗವಾಗಿ ದ್ವಿಚಕ್ರ ವಾಹನದ ಮೇಲೆ ಜಹಿರಾಬಾದ್ಗೆ ಹೋಗುತ್ತಿದ್ದಾಗ ಕಮಲಪುರದ ಇಸ್ಮಾಯಿಲ್ ದಾಬಾದ ಹತ್ತಿರ ಇನ್ನೊಂದು ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ತೀವ್ರ ಗಾಯಗೊಂಡಿದ್ದ ಜಗನ್ನಾಥರೆಡ್ಡಿ ಅವರನ್ನು ಗುಲ್ಬರ್ಗ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದಿಗೆ ಕರೆದುಕೊಂಡು ಹೋಗುತ್ತಿದಾಗ ಜಹಿರಾಬಾದ್ ಸಮೀಪ ಕೊನೆಯುಸಿರೆಳೆದಿದ್ದಾನೆ. ಜಯವಂತರೆಡ್ಡಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಡಿಕ್ಕಿ ಹೊಡೆದ ದ್ವಿಚಕ್ರ ವಾಹನದ ಸವಾರ ಪರಾರಿಯಾಗಿದ್ದಾನೆ. ಈ ಕುರಿತು ಕಮಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.