ಸ್ಫೋಟ ಪ್ರಕರಣ; ಬಸವ ಕೇಂದ್ರ ಖಂಡನೆ
ಕನ್ನಡಪ್ರಭ ವಾರ್ತೆ, ಆಳಂದ, ಜು.9
ಜಗತ್ತಿಗೆ ಶಾಂತಿ ಮಂತ್ರ ಬೋಧಿಸಿದ ಬೌದ್ಧರ ಪವಿತ್ರ ಕ್ಷೇತ್ರ ಬುದ್ಧಗಯಾದಲ್ಲಿ ಸರಣಿ ಬಾಂಬ್ಗಳ ಸ್ಫೋಟದ ಘಟನೆಗೆ ಬಸವ ಕೇಂದ್ರವು ತೀವ್ರವಾಗಿ ಖಂಡಿಸಿದೆ.
ಬಸವ ಕೇಂದ್ರ ಆಶ್ರಯದಲ್ಲಿ ಪಟ್ಟಣದ ಶರಣ ಏಕಾಂತರಾಮಯ್ಯನ ಮಂದಿರದಲ್ಲಿ ಶಾಂತಾಬಾಯಿ ಗುರುಲಿಂಗಯ್ಯ ಸ್ವಾಮಿ ಖಂಡಾಳ ಅವರು ಏರ್ಪಡಿಸಿದ್ದ ಮನೆಯಲ್ಲಿ ಮಹಾಮನೆ ಹಾಗೂ ವಚನ ಸಂಗೀತ್ಯುತ್ಸವ ಕಾರ್ಯಕ್ರಮದಲ್ಲಿ ಸಾಮೂಹಿಕವಾಗಿ ಸ್ಫೋಟದ ಕೃತ್ಯವನ್ನು ಖಂಡಿಸಲಾಯಿತು.
ಜಾಗೃವಾಗಿರಿ: ಸಮಾರಂಭವನ್ನು ಉದ್ಘಾಟಿಸಿದ ಉಸ್ತುರಿ- ಧುತ್ತರಗಾಂವ ಮಠದ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ ಮಾತನಾಡಿ, ಜಾಗತಿಕ ಮಟ್ಟದ ಶಾಂತಿ ನೆಮ್ಮದಿ ತಾಣಗಳಲ್ಲೂ ಅಶಾಂತಿಯುಂಟು ಮಾಡಲು ಇಂಥ ಕೃತ್ಯಗಳು ಉದ್ದೇಶಪೂರ್ವಕವಾಗಿ ಕೈಗೊಳ್ಳಲಾಗುತ್ತಿದೆ. ಗೌತಮ ಬುದ್ಧರು ಬಿಕ್ಕು ಸಂಘವನ್ನು ಕಟ್ಟಿ ಸಮಾಜ ಪರಿವರ್ತನೆ ಮತ್ತು ಶಾಂತಿ ಮಂತ್ರವನ್ನು ಬಿತ್ತರಿಸಿದರೆ, ಬಸವಾದಿ ಶರಣರು ಜಂಗಮ ಸಂಘದ ಮೂಲಕ ಸಮತಾ ಸಮಾಜ ಕಟ್ಟಲು ಪ್ರಯತ್ನಿಸಿದ್ದು, ಇಬ್ಬರ ಮಾರ್ಗ ಒಂದೇಯಾಗಿದೆ. ಆಚರಣೆ, ವಚನಗಳ ಅಧ್ಯಯನ ಅರಿತುಕೊಂಡು ಮೂಲ ಇತಿಹಾಸವನ್ನು ತಿಳಿದು ವೈರಿಗಗಳ ಕೃತ್ಯದ ಕುರಿತು ಜಾಗೃವಾಗಿರಬೇಕು ಎಂದರು.
ಚಿಂಚೋಳಿ ಕಸಾಪ ಅಧ್ಯಕ್ಷ ಸುಭಾಷ ಶಿಲವಂತ ಮತ್ತು ಪ್ರವಚನಕಾರ ಕರಬಸಯ್ಯ ಶಾಸ್ತ್ರಿ ಮಾತನಾಡಿದರು. ಶಾಂತಾಬಾಯಿ ಗುರುಲಿಂಗಯ್ಯ ದಂಪತಿ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ವಿಜಯಲಕ್ಷ್ಮೀ ಮಲ್ಲಿನಾಥ ಹತ್ತರಕಿ ದಂಪತಿಗೆ ಸನ್ಮಾನಿಸಲಾಯಿತು.
ಪುರಸಭೆ ಮಾಜಿ ಅಧ್ಯಕ್ಷ ಶ್ರೀಮಂತರಾವ ಪಾಟೀಲ್, ನಿವೃತ್ತ ಪ್ರಾಧ್ಯಾಪಕ ಎಸ್.ಎಚ್. ಗೋಧೆ, ಭೀಮಾಶಂಕರ ಮಡಿವಾಳ, ಶ್ರೀಮಂತ ಕಾರಬಾರಿ, ಮಲ್ಲಣ್ಣಕರ್, ಕಾಶಿನಾಥ ಸಲಗರ, ದಯಾನಂದ ಶೇರಿಕಾರ, ಎಸ್.ಡಿ. ಸಾಗರಶೆಟ್ಟಿ, ಶಿಕ್ಷಕ ಮಲ್ಲಿನಾಥ ತುಕಾಣಿ, ಶ್ರೀಪಾಲ ಎಸ್. ಬೋಗಾರ, ಶರಣಪ್ಪ ಘಂಟೆ, ಚಂದ್ರಶೇಖರ ಕಂಬಾರ, ಲಿಂಗು ಪಾಟೀಲ್ ಇದ್ದರು.