ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.10
ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ಪೂರಕ ಪೌಷ್ಠಿಕ ಆಹಾರವನ್ನು ಕೊಡುವ ಬದಲಿಗೆ ಪೌಷ್ಠಿಕತೆಯ ಶಿಕ್ಷಣ ಮತ್ತು ಸಲಹೆಗಳನ್ನು ನೀಡಬೇಕು. ಶೇ.10 ರಷ್ಟು ಐಸಿಡಿಎಸ್ ಪ್ರಾಜೆಕ್ಟ್‌ಗಳನ್ನು ಕಡ್ಡಾಯವಾಗಿ ಖಾಸಗೀಕರಿಸಬೇಕು, ಶೇ.10 ಐಸಿಡಿಎಸ್ ಪ್ರಾಜೆಕ್ಟ್‌ಗಳನ್ನು ಪಂಚಾಯತ್ ರಾಜ್ ಇಲಾಖೆಗೆ ಒಪ್ಪಿಸಬೇಕು, ಎಲ್ಲ ನೌಕರರನ್ನು ಗುತ್ತಿಗೆ ಕಾರ್ಮಿಕರಾಗಿ ಪರಿಗಣಿಸುವ ಕಡೆ ಹೆಚ್ಚಿನ ಒತ್ತು ನೀಡಬೇಕೆಂದು ಒತ್ತಾಯಿಸಿದರು.
ಹೆಚ್ಚುವರಿ ಸಿಬ್ಬಂದಿಯನ್ನು ಒದಗಿ: ಒಟ್ಟು ಅಂಗನವಾಡಿ ಕೇಂದ್ರಗಳಲ್ಲಿ ಶೇ.15 ಕೇಂದ್ರಗಳಿಗೆ ಕೇಂದ್ರಕ್ಕೆ ಒಬ್ಬರು ಸಲಹೆಗಾರರು, ಹೆಚ್ಚುವರಿ ಸಿಬ್ಬಂದಿಯನ್ನು ಒದಗಿಸಬೇಕು, ಇದರಲ್ಲಿ ನೇರವಾಗಿ ಸರ್ಕಾರದಿಂದ ನೇಮಿಸಬೇಕು, ಅದರ ಬದಲು ಎನ್‌ಜಿಓಗಳಿಗೆ ಕೆಲಸ ಕೊಡುವ ಅಪಾಯವಿದೆ ಎಂದು ಅಭಿಪ್ರಾಯಪಟ್ಟರು.
ಇನ್ನು ಮುಂದೆ ಅಂಗನವಾಡಿ ಸಹಾಯಕಿಗೂ ಕನಿಷ್ಠ ವಿದ್ಯಾರ್ಹತೆ, ಕಾರ್ಯಕರ್ತೆ ಕಡ್ಡಾಯವಾಗಿ ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು, ಈಗಾಗಲೇ ಜಾರಿಯಲ್ಲಿರುವ ವಯೋವುತಿ 44ರಿಂದ 35ಕ್ಕೆ ಇಳಿಸಬೇಕು. ಐಸಿಡಿಎಸ್‌ನ್ನು ಕ್ರಮಬದ್ಧಗೊಳಿಸಿ ಅದೊಂದು ಇಲಾಖೆಯಾಗಿ ಮಾಡಬೇಕು, ಎಲ್ಲ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಅಂಗನವಾಡಿ ಕೇಂದ್ರ ಮತ್ತು ಶಿಶು ವಿಹಾರಗಳನ್ನಾಗಿಸಬೇಕು. ಅಂಗನವಾಡಿ ಖಾಸಗೀಕರಣ ಮಾಡಬೇಕೆಂದು ಒತ್ತಾಯಿಸಿದರು.
ಗೌರವ ವೇತನಕ್ಕೆ ಮನವಿ: ಅಂಗನವಾಡಿ ನೌಕರರನ್ನು ಮತ್ತು ಸಹಾಯಕರನ್ನು ಸರ್ಕಾರದ 3 ಮತ್ತು 4ನೇ ದರ್ಜೆಯ ನೌಕರರನ್ನಾಗಿ ಕ್ರಮಬದ್ಧಗೊಳಿಸಿ ಕ್ರಮಬದ್ಧಗೊಳಿಸುವವರೆಗೆ ಅವರ ಗೌರವ ವೇತನವನ್ನು ಕೂಡಲೇ ಕ್ರಮವಾಗಿ 15ಸಾವಿರ ಮತ್ತು 10 ಸಾವಿರ ಹೆಚ್ಚಿಸಬೇಕೆಂದು ಮನವಿ ಮಾಡಿದರು.
ಎಲ್ಲ ಅಂಗನವಾಡಿ ನೌಕರರಿಗೆ ಮತ್ತು ಸಹಾಯಕರಿಗೆ ಕನಿಷ್ಠ ನಿವೃತ್ತಿ ವೇತನ ಮತ್ತು ಗ್ರಾಚ್ಯುಟಿ, ಭವಿಷ್ಯ ನಿಧಿ ಇತ್ಯಾದಿ ಇತರ ಸಾಮಾಜಿಕ ಸುಭದ್ರತೆಗಳು, ವೈದ್ಯಕೀಯ ಸೌಲಭ್ಯಗಳು ಒದಗಿಸಬೇಕು, ನಿವೃತ್ತಿ ವೇತನ ಮತ್ತು ಇತರ ಸೌಲಭ್ಯಗಳಿಲ್ಲದೆ ಸೇವೆಯಿಂದ ತೆಗೆಯಬಾರದು ಎಂದು ಒತ್ತಾಯಿಸಿದರು.
ಐಡಿಸಿಎಸ್‌ನ್ನು ಖಾಸಗಿಕರಿಸುವ ಮುಖಾಂತರ ಯೋಜನೆಯನ್ನು ನಿಧಾನವಾಗಿ ಸ್ಥಗಿತಗೊಳಿಸಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಹಾಗೂ ಇತರ ಬೇಡಿಕೆಗಳಿಗೆ ಒತ್ತಾಯಿಸಿ ಗೌರಮ್ಮ ಪಾಟೀಲ್, ಶಾಂತಾ ಘಂಟಿ, ವೀರಮ್ಮ ಬಂಗಾರ ಕಿರಣಗಿ, ಮಹಾದೇವಿ ಕುಡಳ್ಳಿ ನೇತೃತ್ವದಲ್ಲಿ ಕಾರ್ಯಕರ್ತೆಯರು, ಸಹಾಯಕಿಯರು ರ್ಯಾಲಿಯಲ್ಲಿ ಭಾಗವಹಿಸಿದ್ದರು.