ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹಣ ದುರ್ಬಳಕೆ; ನಾಲ್ವರು ಅಧಿಕಾರಿಗಳ ಅಮಾನತು

Lingaraj Badiger
Updated On : 11 Jul 2013, 10:58 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.10
ಹಣದ ದುರ್ಬಳಕೆ, ಅವ್ಯವಹಾರ ಹಾಗೂ ಕರ್ತವ್ಯ ಲೋಪದ ಆರೋಪದ ಮೇರೆಗೆ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಎಚ್. ಭೀಮಕ್ಕನವರ್ ಸೇರಿದಂತೆ ಗುಲ್ಬರ್ಗ ಜಿಲ್ಲೆಯ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ನಾಲ್ವರು ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧೀನ ಕಾರ್ಯದರ್ಶಿ (ಸೇವೆಗಳು- ಎ) ಎಚ್.ಸಿ. ರಾಜಪ್ಪ ಅಮಾನತು ಆದೇಶ ಹೊರಡಿಸಿದ್ದಾರೆ. ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಎಚ್. ಭೀಮಕ್ಕನವರ್, ಎಂಜಿನಿಯರಿಂಗ್ ವಿಭಾಗದ ಲೆಕ್ಕಾಧಿಕಾರಿ ಎಸ್.ಪಿ. ಪಾಟೀಲ್, ಕಿರಿಯ ಶ್ರೇಣಿಯ ತಾಂತ್ರಿಕ ಸಹಾಯಕರಾದ ಅರುಣಕುಮಾರ್ ಮತ್ತು ಚಂದ್ರಶೇಖರ ನಾಶಿ ಹೀಗೆ ನಾಲ್ವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಆರೋಪಗಳ ಬಗ್ಗೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಪದನಿಮಿತ್ತ ಕಾರ್ಯದರ್ಶಿ ಮುನೀಷ ಮೌದ್ಗಿಲ್ ಅವರಿಂದ ವಿಚಾರಣೆ ನಡೆಸಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಗುಲ್ಬರ್ಗದಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ನಿಜವಾದ ಗುತ್ತಿಗೆದಾರರಿಗೆ ಹಣ ಪಾವತಿಸಿಲ್ಲ ಎಂದು ಮೌದ್ಗಿಲ್ ವಿಚಾರಣಾ ವರದಿಯಲ್ಲಿ ಸರ್ಕಾರದ ಗಮನ ಸೆಳೆದಿದ್ದಾರೆ.
ಕೋಟ್ಯಂತರ ರು.ಗಳನ್ನು ಬೋಗಸ್ ಗುತ್ತಿಗೆದಾರರಿಗೆ ಪಾವತಿಸಲಾಗಿದೆ. ಅನುಮೋದನೆ ಪಡೆಯಲಾಗಿರದಂಥ ಅನಧಿಕೃತ ಕಾಮಗಾರಿಗಳಿಗೆ ಅಧಿಕೃತವಲ್ಲದ ಅನೇಕ ಜನರಿಗೆ ಭಾರಿ ಮೊತ್ತ ಪಾವತಿಸುವ ಮೂಲಕ ವಂಚನೆಯ ಜಾಲವನ್ನು ಅತಿ ವ್ಯವಸ್ಥಿತವಾಗಿ ಹೆಣೆದು ಸಾರ್ವಜನಿಕರ ಹಣವನ್ನು ಲೂಟಿ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
4 ಕೋಟಿಗಿಂತಲೂ ಹೆಚ್ಚಿನ ಮೊತ್ತದ ನಕಲಿ ಬಿಲ್ಲುಗಳು ವಿಚಾರಣೆ ಸಂದರ್ಭದಲ್ಲಿ ಪತ್ತೆಯಾಗಿವೆ. ಪಂ. ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಸ. ಕಾರ್ಯನಿರ್ವಾಹಕ ಎಂಜಿನಿಯರ್ ಸಹಿಗಳನ್ನು ಫೋರ್ಜರಿ ಮಾಡಲಾಗಿದೆ. ವಂಚನೆ, ಮೋಸ ಮತ್ತು ಕ್ರಿಮಿನಲ್ ಪಿತೂರಿಯ ಸೂತ್ರದಾರ ಎಂ.ಎಚ್. ಭೀಮಕ್ಕನವರ್ ಎಂಬುವುದನ್ನು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement