ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂದು ನೀರು ಪೂರೈಕೆ ವ್ಯತ್ಯಯ

Lingaraj Badiger
Updated On : 12 Jul 2013, 11:03 am

ಗುಲ್ಬರ್ಗ: ನಗರಕ್ಕೆ ನೀರು ಸರಬರಾಜು ಮಾಡುವ ಭೀಮಾ ನದಿಯ ಮೂಲ ಸ್ಥಾವರ ಸರಡಗಿ ಪಂಪ್ ಹೌಸ್‌ನಲ್ಲಿ ಇರುವ 1200 ಎಚ್‌ಪಿಯ ಸ್ಟಾರ್ಟರ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿರುವ ನಿಟ್ಟಿನಲ್ಲಿ ಜು.12ರಂದು ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು. ಆದರಿಂದ ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿದೆ.
ಇಂದು ಉಚಿತ ತಪಾಸಣಾ ಶಿಬಿರ
ಗುಲ್ಬರ್ಗ: ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿಗಳು(ಅಂಧತ್ವ ವಿಭಾಗ) ಮತ್ತು ಜಿಲ್ಲಾ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ಜಿಲ್ಲಾ ನೇತ್ರ ಶಸ್ತ್ರ ಚಿಕಿತ್ಸಾ ಘಟಕದ ಹಾಗೂ ಆರ್ಜೂ ಎಜುಕೇಶನ್ ಹಾಗೂ ಚಾರಿಟಬಲ್ ಟ್ರಸ್ಟ್‌ನ ಸಹಯೋಗದೊಂದಿಗೆ ಜುಲೈ 12ರಂದು ಬೆ.9 ಗಂಟೆಯಿಂದ ಮಧ್ಯಾಹ್ನ 1ರವರೆಗೆ ಹೀರಾಪುರ ನಗರ ಆರೋಗ್ಯ ಕೇಂದ್ರದಲ್ಲಿ ಮೋತಿಬಿಂದು ಉಚಿತ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ನೇತ್ರ ತಜ್ಞ ಡಾ. ಉದಯ ಪಾಟೀಲ್ ತಪಾಸಣೆ ಮಾಡುವರು. ಶಸ್ತ್ರ ಚಿಕಿತ್ಸೆ ಮಾಡಿದ ಫಲಾನುಭವಿಗಳಿಗೆ ಉಚಿತ ಊಟ ಔಷಧ ವಿತರಿಸಲಾಗುವುದು. ವಿವರಕ್ಕೆ ದೂ.08472-278649, 9845632609, 9449843197 ಸಂಪರ್ಕಿಸಿ.
7.5 ಲಕ್ಷ ಚಿನ್ನದ ಆಭರಣ ಕಳವು
ಗುಲ್ಬರ್ಗ: ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಕುಳಿತ ಕುಟುಂಬ ಸದಸ್ಯರನ್ನು ಬೇರೆ ಕಡೆಗೆ ಗಮನ ಸೆಳೆದು 3 ಜನ ಕಳ್ಳರು ಬಸ್ಸಿನ ಕ್ಯಾರಿಯರ್ ಮೇಲೆ ಇಟ್ಟಿದ್ದ ಸೂಟ್‌ಕೇಸ್ ಕಳ್ಳತನ ಮಾಡಿದ್ದು, 7.5 ಲಕ್ಷ ಮೌಲ್ಯದ ಚಿನ್ನದ ಆಭರಣಗಳು ಕಳ್ಳತನವಾಗಿರುವ ಕುರಿತು ಅಶೋಕ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಆಳಂದ ಪಟ್ಟಣದ ಜೈನ್ ಬಡಾವಣೆಯ ನಾಗೇಶ, ಪತ್ನಿ ಲಕ್ಷ್ಮೀ ಮತ್ತು ಮಕ್ಕಳು ಆಳಂದ ಎಸ್‌ಬಿಎಚ್ ಬ್ಯಾಂಕಿನ ಲಾಕರ್‌ನಲ್ಲಿಟ್ಟಿದ್ದ 7.5ಲಕ್ಷ ಮೌಲ್ಯದ ಆಭರಣಗಳನ್ನು ಸೂಟ್‌ಕೇಸ್‌ನಲ್ಲಿ ತೆಗೆದುಕೊಂಡು ಸಂಬಂಧಿಕರ ಮದುವೆಗೆ ಗುಲ್ಬರ್ಗ ಬಸ್ ನಿಲ್ದಾಣದಿಂದ ಬುಧವಾರ ರಾತ್ರಿ ಬೀದರ್‌ಗೆ ಹೋಗಲು ರಾಜಹಂಸ ಬಸ್ಸಿನಲ್ಲಿ ಕುಳಿತಿದ್ದರು. ಒಬ್ಬ ವ್ಯಕ್ತಿ ನಾಗೇಶ ಕುಟುಂಬದವರು ಕುಳಿತ ಆಸನಗಳ ಬಳಿ ಬಂದು ಕೆಳಗೆ ನಿಂತ ವ್ಯಕ್ತಿಯೊಂದಿಗೆ ಮಾತನಾಡಿಸಲು ಪ್ರಾರಂಭಿಸಿದ್ದನು. ಅದೇ ವೇಳೆ ಕೆಳಗೆ ನಿಂತ ಇನ್ನೊಬ್ಬ ವ್ಯಕ್ತಿಯೊಬ್ಬ ಈ ಕುಟುಂಬದವರಿಗೆ ಸಮಯ ಎಷ್ಟೆಂದು ಕೇಳುವ ಸಂದರ್ಭದಲ್ಲಿ ಅಲ್ಲಿ ನಿಂತಿದ್ದ ವ್ಯಕ್ತಿ ಕ್ಯಾರಿಯರ್ ಮೇಲಿಂದ ಸೂಟ್‌ಕೇಸ್ ತೆಗೆದುಕೊಂಡು ಪರಾರಿಯಾಗಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾರೆ.
ಡಿಕ್ಕಿ: ವ್ಯಕ್ತಿ ಸಾವು
ಗುಲ್ಬರ್ಗ: ಟಂಟಂ ಗೂಡ್ಸ್‌ಮೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ನಗರದ ಹುಮನಾಬಾದ್ ರಸ್ತೆಯ ಖಾನ್ ಮೋಟಾರ್ಸ್ ಬಳಿ ಮಂಗಳವಾರ ಸಂಜೆ ನಡೆದಿದೆ. ಅಬ್ದುಲ್ ಗಂಜ್ ಬಸ್ ನಿಲ್ದಾಣಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಟಂಟಂ ಗೂಡ್ಸ್ ಚಾಲಕ ವೇಗವಾಗಿ ಚಲಾಯಿಸಿದ ಪರಿಣಾಮ ಡಿಕ್ಕಿ ಸಂಭವಿಸಿದ್ದು, ಗಾಯಗೊಂಡ ಅಬ್ದುಲ್‌ಗೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement