ಕುಡಿವ ನೀರಿನ ಘಟಕದ ಮೇಲೆ ದಾಳಿ, ಜಪ್ತಿ
ಗುಲ್ಬರ್ಗ: ನಗರದಲ್ಲಿ ಜಿಲ್ಲಾಧಿಕಾರಿ ಹಾಗೂ ನ್ಯಾಯ ನಿರ್ಣಯ ಅಧಿಕಾರಿಗಳು ಎಸ್ಎಸ್ಎಸ್ಎಐ ಗುಲ್ಬರ್ಗ, ಅಂಕಿತ ಅಧಿಕಾರಿಗಳು ಹಾಗೂ ಜಿಲ್ಲಾ ಸಮೀಕ್ಷಣಾಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಮಹಾನಗರ ಪಾಲಿಕೆ, ಪರಿಸರ ಅಭಿಯಂತರರು ಪಾಲಿಕೆ ಮತ್ತು ಆಹಾರ ಸುರಕ್ಷತಾ ಅಧಿಕಾರಿ ಪಾಲಿಕೆಯವರು ತಂಡದೊಂದಿಗೆ ನಗರದಲ್ಲಿ ಅನಧಿಕೃತ ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕದವರು ಬಿಐಎಸ್ನಿಂದ ಐಎಸ್ಐ ಪ್ರಮಾಣಪತ್ರ ಇಲ್ಲದೆ ತಯಾರಿಕೆ ಮತ್ತು ಮಾರಾಟ ಮಾಡುವ ಘಟಕಗಳ ಮೇಲೆ ಜುಲೈ 10ರಂದು ದಾಳಿ ನಡೆಸಿ ಜಪ್ತಿ ಮಾಡಲಾಯಿತು. ಸಂಗಮೇಶ ರಾಮಚಂದ್ರ ನಾಗನಳ್ಳಿ ಮಧು ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕ ಗುಲ್ಬರ್ಗ (ಮಧು ಬ್ರಾಂಡ್), ಅಕ್ಕಮಹಾದೇವಿ ನರಸಿಂಹ ಕುಂಬಾರ ಎಸ್. ದೇವಿ ಎಂಟರ್ಪ್ರೈಸೆಸ್ ಶಹಾಬಾದ್ ರಸ್ತೆ ಗುಲ್ಬರ್ಗ (ರುಚಿ ಬ್ರಾಂಡ್)ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕ ಹಾಗೂ ಚನ್ನಬಸಪ್ಪ ಎಸ್. ಪಾಟೀಲ್ ಚಂದನ ಪ್ಯಾಕೇಜ್ಡ್ ಕುಡಿವ ನೀರಿನ ಘಟಕ ಬಸವೇಶ್ವ ಕಾಲೋನಿ ಗುಲ್ಬರ್ಗ (ಚಂದನ ಬ್ರಾಂಡ್) ಈ ಮೂರು ನೀರಿನ ಘಟಕಗಳನ್ನು ಜಪ್ತಿ ಮಾಡಿದ್ದು, ಮುಂದಿನ ಕ್ರಮಕ್ಕಾಗಿ ಸಂಬಂಧಿಸಿದ ಅಧಿಕಾರಿಗಳ ಮುಖಾಂತರ ಕ್ರಮ ಜರುಗಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.