ನಿತ್ಯ ಸೋಲಾಪುರ- ಯಶವಂತಪುರ ಸೂಪರ್ ಫಾಸ್ಟ್
ಗುಲ್ಬರ್ಗ: ಗುಲ್ಬರ್ಗ ಭಾಗದ ಜನತೆಗೆ ಇದು ನಿಜಕ್ಕೂ ಸಂತಸದ ಸುದ್ದಿ, ಗುಲ್ಬರ್ಗದ ಸಂಸದರಾಗಿರುವ ಮಲ್ಲಿಕಾರ್ಜುನ ಖರ್ಗೆ ಕೇಂದ್ರದಲ್ಲಿ ರೇಲ್ವೆ ಮಂತ್ರಿಗಳಾದ ನಂತರ ಗುರುವಾರ ನಗರಕ್ಕೆ ನೀಡಿರುವ ಚೊಚ್ಚಲ ಭೇಟಿಯಲ್ಲಿ ಸೋಲಾಪುರದಿಂದ- ಯಶವಂತಪುರಕ್ಕೆ ವಾರಕ್ಕೆ ಮೂರು ದಿನ ಸಂಚರಿಸುತ್ತಿದ್ದ ಸೂಪರ್ ಫಾಸ್ಟ್ ರೈಲನ್ನು ಇನ್ನೊಂದು ತಿಂಗಳಲ್ಲಿ ಪ್ರತಿನಿತ್ಯ ಸಂಚರಿಸುವಂತೆ ಮಾಡುವುದಾಗಿ ಮಹತ್ವದ ಘೋಷಣೆ ಮಾಡಿದ್ದಾರೆ.
ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನಿತಗೊಂಡು ಮಾತನಾಡಿದ ಅವರು, ಗುಲ್ಬರ್ಗ ಜಿಲ್ಲೆಯ ಬಹುದಿನಗಳ ಬೇಡಿಕೆಯಾಗಿರುವ ಸೋಲಾಪುರ- ಯಶವಂತಪುರ ರೇಲು ಅಗಸ್ಟ್ ತಿಂಗಳಾಂತ್ಯಕ್ಕೆ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಪ್ರತಿನಿತ್ಯ ಸಂಚರಿಸಲಿದೆ ಎಂದಾಗ ಸೇರಿದ ಜನ ಚಪ್ಪಾಳೆ ತಟ್ಟಿ ಖರ್ಗೆ ಮಾತನ್ನು ಸ್ವಾಗತಿಸಿದರು.
ಈ ರೇಲಿಗೆ ಇನ್ನೂ ಹೆಚ್ಚಿನ ಭೋಗಿಗಳನ್ನು ಅಳವಡಿಸಿ, ವಾಡಿ ರೇಲು ನಿಲ್ದಾಣ ವಿದ್ಯುತೀಕರಣಗೊಳಿಸಲಾಗುವುದು. ಈ ಕಾಮಗಾರಿಗಾಗಿ ಈಗಾಗಲೇ ಹಣ ಮಂಜೂರಾತಿ ಆಗಿದೆ. ಗುಲ್ಬರ್ಗದಿಂದ ಹೋರಟವರಿಗೆ ಡಬಲ್ ಲೈನ್ ಶೀಘ್ರದಲ್ಲಿ ಅಳವಡಿಸಲಾಗುವುದು ಎಂದರು.