ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ
ಗುಲ್ಬರ್ಗ: ಗುಲ್ಬರ್ಗ ರೇಲ್ವೆ ವಿಭಾಗ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಜಿಲ್ಲಾ ಕಾಂಗ್ರೆಸ್ ಸಮಿತಿ ಹಂಗಾಮಿ ಅಧ್ಯಕ್ಷ ಭಾಗಣಗೌಡ ಗುರುವಾರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ವಾರದಲ್ಲಿ ಮೂರು ದಿವಸ ಸಂಚರಿಸುವ ಸೋಲಾಪುರ- ಯಶವಂತಪುರ ರೈಲು ದಿನಾಲು ಸಂಚರಿಸುವಂತೆ ಮಾಡಬೇಕು. ಗುಲ್ಬರ್ಗ- ಬೀದರ್ ರೇಲ್ವೆ ಮಾರ್ಗ ಆದಷ್ಟು ಬೇಗ ಮುಗಿಸಬೇಕು. ಗುಲ್ಬರ್ಗದಲ್ಲಿ ರೇಲ್ವೆ ಬೋಗಿ ಮತ್ತು ರೇಲ್ವೆ ಚಕ್ರ ಉತ್ಪಾದನಾ ಘಟಕ ಸ್ಥಾಪಿಸಬೇಕು. ಸೇಡಂ ಮತ್ತು ಚಿತ್ತಾಪುರದಲ್ಲಿ ಗರೀಬರಥ ರೇಲು ನಿಲುಗಡೆ ಮಾಡಬೇಕು. ವಾಡಿ ಗದಗ ರೇಲು ಮಾರ್ಗ ಕಾಮಗಾರಿ ಶೀಘ್ರ ಪ್ರಾರಂಭಿಸಬೇಕೆಂದು ಮನವಿ ಮಾಡಿದರು.
ಬಿಜಾಪುರದಿಂದ ಮುಂಬಯಿಗೆ ಹೋಗುವ ಫಾಸ್ಟ್ ಫ್ಯಾಸೆಂಜರ್ ರೇಲಿನ ಹಾಗೆ ಗುಲ್ಬರ್ಗದಿಂದ ಬೆಂಗಳೂರಿಗೆ ಹೊಸದಾಗಿ ಫಾಸ್ಟ್ ಪ್ಯಾಸೆಂಜರ್ ರೈಲು ಓಡಿಸಬೇಕು. ಗುಲ್ಬರ್ಗದಿಂದ ಬೆಂಗಳೂರಿಗೆ ಹೊಸದಾಗಿ ಗರೀಬರಥ ರೈಲು ಓಡಿಸಬೇಕು. ಗುಲ್ಬರ್ಗದಲ್ಲಿ ಹೊಸದಾಗಿ 4 ರೇಲ್ವೆ ಕೌಂಟರ್ಗಲನ್ನು ತೆರೆಯಬೇಕೆಂದು ಒತ್ತಾಯಿಸಿದರು.