ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜನರ ಬೇಡಿಕೆ ಈಡೇರಿಸುವರೇ ಖರ್ಗೆ

Vishwanath S
Updated On : 14 Jul 2013, 12:34 pm

ಚಿತ್ತಾಪುರ: ಚಿತ್ತಾಪುರದಲ್ಲಿ ಕೋನಾರ್ಕ, ರಾಜಕೋಟ, ಶತಾಬ್ದಿ ರೇಲುಗಳನ್ನು ನಿಲುಗಡೆ ಬೇಡಿಕೆಯು ಇಲ್ಲಿಯ ಜನರ ಬಹುದಿನಗಳಿಂದ ಇದ್ದು, ಈಗ ಸಂಚರಿಸುವ ಹುಸೇನಸಾಗರ ಎಕ್ಸ್‌ಪ್ರೆಸ್ ಬೇರೆ ಮಾರ್ಗದಿಂದ ಸಂಚರಿಸುವ ಬಗ್ಗೆ ಎದ್ದಿರುವ ಉಹಾಪೋಹೆಗಳನ್ನು ಅಲ್ಲಗಳೆದು ಮೊದಲಿನಂತೆ ಸಂಚರಿಸುವಂತೆ ಮಾಡುವಲ್ಲಿ ಜಿಲ್ಲೆಯವರೇ ಆದ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಸ್ಪಂದಿಸಿ ಬೇಡಿಕೆಗಳನ್ನು ಈಡೇರಿಸುವರೇ ಎಂದು ಇಲ್ಲಿನ ನಾಗರಿಕರು ಕಾಯುತ್ತಿದ್ದಾರೆ.
ಪಟ್ಟಣದಲ್ಲಿ ಐತಿಹಾಸಿಕ ದೇವಾಲಯಗಳಾದ ನಾಗಾವಿ ಎಲ್ಲಮ್ಮ, ಹಜರತ್ ಚಿತಾಶವಲಿ ದರ್ಗಾಗಳಿಗೆ ಪ್ರತಿದಿನವೂ ಬಾಂಬೆ ಹೈದ್ರಾಬಾದ್, ಪುಣಿ, ಸೋಲ್ಲಾಪುರ, ಅಹ್ಮದಬಾದ್ ಇನ್ನಿತರ ರಾಜ್ಯಗಳಿಂದ ನೂರಾರು ಭಕ್ತರು ಬರುತ್ತಾರೆ. ಅಲ್ಲದೇ ಇಲ್ಲಿನ ವ್ಯಾಪಾರಸ್ಥರು ತಮ್ಮ ಖರೀದಿಗೆ ದೂರ ಊರುಗಳಿಗೆ ಹೋಗಲು ಅನುಕೂಲವಿಲ್ಲದೆ ತೊಂದರೆ ಪಡುತ್ತಿದ್ದಾರೆ. ಇಲ್ಲಿಂದ ಹತ್ತಾರು ರೇಲುಗಳು ಸಂಚರಿಸಿದರು ಕೆಲವಷ್ಟೆ ಮಾತ್ರ ಉಪಯೋಗವಾಗುತ್ತಿವೆ. ಹೈದ್ರಾಬಾದ್, ಬೆಂಗಳೂರು, ಮುಂಬಯಿಗೆ ಇಲ್ಲಿಂದ 14ಕ್ಕೂ ಹೆಚ್ಚು ಎಕ್ಸ್‌ಪ್ರೆಸ್, 4ಕ್ಕೂ ಹೆಚ್ಚು ಪ್ಯಾಸೆಂಜರ್ ರೈಲುಗಳು ಈ ಮಾರ್ಗವಾಗಿ ಹೋಗುತ್ತವೆ. ಆದರೆ ನಿಲುಗಡೆ ಮಾತ್ರ ಕೇವಲ 6 ಎಕ್ಸ್‌ಪ್ರೆಸ್ ಹಾಗೂ 2 ಪ್ಯಾಸೆಂಜರ್ ರೇಲುಗಳು ನಿಲ್ಲುತ್ತವೆ. ಅವುಗಳಲ್ಲಿ ಕೆಲವು ರೇಲುಗಳು ಇಲ್ಲಿ  ಉಪಯೋಗಕ್ಕಿಲ್ಲ.
ಸಮಯ ಬದಲಾವಣಿಗೆ ಒತ್ತಾಯ: ತಿರುಪತಿಯಿಂದ ಹೈದ್ರಾಬಾದ್‌ಗೆ ತೆರಳುವ ರೇಲು ಮೊದಲು ಚಿತ್ತಾಪುರಕ್ಕೆ ಬೆಳಿಗ್ಗೆ 6.30ಕ್ಕೆ ಬರುತ್ತಿತ್ತು. ಇದರಿಂದ ಇಲ್ಲಿನ ನೂರಾರು ಜನರು ರಾಜಶ್ರೀ, ವಾಸವದತ್ತಾ ಸಿಮೆಂಟ್ ಕಂಪನಿಗಳಿಗೆ ಹೊಟ್ಟೆಪಾಡಿಗಾಗಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಅದು ಈಗ ರೇಲಿನ ಸಮಯ ಬದಲಾಗಿರುವುದರಿಂದ ನೂರಾರು ಕಾರ್ಮಿಕರು ಕೆಲಸಕ್ಕೆ ಹೋಗಲು ತುಂಬಾ ತೊಂದರೆ ಪಡುವಂತಾಗಿದೆ.  ಗುಲ್ಬರ್ಗ ಹೈದ್ರಾಬಾದ್ ಇಂಟರ್‌ಸಿಟಿ ರೇಲು ಬೆಳಿಗ್ಗೆ 4.30ಕ್ಕೆ ಬಂದು ತಾಂಡೂರದಲ್ಲಿ ಸುಮಾರು 2 ನಿಲುಗಡೆ ಮಾಡುತ್ತದೆ. ಇದೇ ರೇಲು ಗುಲ್ಬರ್ಗದಿಂದ 2 ಗಂಟೆ ತಡವಾಗಿ ಬಂದರೆ ನಂದೂರ, ಮರತೂರ, ಶಹಾಬಾದ್, ವಾಡಿ, ಸೂಲಹಳ್ಳಿ, ಚಿತ್ತಾಪುರ, ಮಳಖೇಡದ ಸಿಮೆಂಟ್ ಕಂಪನಿಗಳಿಗೆ ಹೋಗುವ ಕೂಲಿ ಕಾರ್ಮಿಕರಿಗೆ ತುಂಬಾ ಅನುಕೂಲವಾಗುತ್ತದೆ ಎಂಬುದು ಇಲ್ಲಿನ ಬಹುಜನರ ಬೇಡಿಕೆ.
ಬೇಡಿಕೆಗಳು:  ತಾಲೂಕಿನಿಂದ ಉದ್ಯೋಗ ಅರಸಿ ರಾಜಧಾನಿ ಬೆಂಗಳೂರು, ಮುಂಬೈ, ಪುನಾ ಹೀಗೆ ಹಲವು ಜಿಲ್ಲೆಗಳಿಗೆ ಹೋಗುವ ಜನರ ಸಂಖ್ಯೆ ಹೆಚ್ಚಾಗಿದ್ದು, ಈಗಿರುವ ರೈಲುಗಳಲ್ಲಿ ಪ್ರಯಾಣ ಕಷ್ಟ ಸಾಧ್ಯವಾಗಿರುವುದು. ಹೀಗಾಗಿ ಅವರ ಅನುಕೂಲಕ್ಕಾಗಿ ಹೈದ್ರಾಬಾದ್ -ಗುಲ್ಬರ್ಗ- ಸೋಲಾಪುರ ಮತ್ತು ಹೈದ್ರಾಬಾದ್- ರಾಯಚೂರ- ಗುಂತಕಲ್- ಬೆಂಗಳೂರು ನಡುವೆ ಇಂಟರ್‌ಸಿಟಿ ರೇಲನ್ನು ನೀಡಿದಲ್ಲಿ ಇಲ್ಲಿನ ಜನರ ಬಹುದಿನಗಳ ಕನಸು ನನಸಾದಂತೆ ಆಗುತ್ತದೆ.
ಅಭಿವೃದ್ಧಿಯ ಹರಿಕಾರ, ಜನರ ಸಮಸ್ಯೆಗೆ ಸ್ಪಂದಿಸುವ ಚಲಗಾರ ಎಂದೆನಿಸಿರುವ ಖರ್ಗೆ ತಾಲೂಕಿನ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಹೊಸ ಯೋಜನೆಗಳಿಗೆ ಸ್ಪಂಧಿಸುವಂತೆ ತಾಲೂಕಿನ ಜನತೆ ಅವರಿಗೆ ಒತ್ತಾಯಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement