ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ: ಆರ್.ವಿ. ನಾಯಕ
ಸುರಪುರ: ಶಾಸಕನಾಗಿ ತಾಲೂಕಿನ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಬಗೆಹರಿಸಲು ಪ್ರಮಾಣಿಕವಾಗಿ ಪ್ರಯತ್ನಿಸುತ್ತೇನೆ. ಇದೇ ರೀತಿ ಮುಂದೆಯೂ ಎಲ್ಲರ ಆಶೀರ್ವಾದ ನನ್ನ ಮೇಲಿರಲಿ ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು.
ಅಭಿವೃದ್ಧಿಗೆ ಒತ್ತು: ತಾಲೂಕಿನ ಬೈರಿಮಡ್ಡಿ ಗ್ರಾಮಸ್ಥರಿಂದ ಪಟ್ಟಣದ ತಮ್ಮ ನಿವಾಸದಲ್ಲಿ ಸನ್ಮಾನ ಸ್ವೀಕರಿಸಿ, ಜನತೆಯ ನಂಬಿಕೆ, ವಿಶ್ವಾಸಕ್ಕೆ ಎಂದೂ ದ್ರೋಹ ಬಗೆಯದಂತೆ ಪ್ರಾಮಾಣಿವಾಗಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಈ ಗ್ರಾಮ ಸಣ್ಣ ಗ್ರಾಮವಾಗಿದ್ದರೂ ನನಗೆ ದೊಡ್ಡದಾದ ಸನ್ಮಾನ ಮಾಡಿ ಋಣ ಭಾರವನ್ನು ಹೆಚ್ಚು ಮಾಡಿದ್ದೀರಿ.
ಎರಡು ಸಲ ಸೋಲು ಅನುಭವಿಸಿದರೂ, ನಿರಾಶನಾಗದೇ ಸದಾ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿದ ಫಲವಾಗಿ ಇಂದು ಅಧಿಕಾರ ಮತ್ತೊಮ್ಮೆ ನನಗೆ ಒಲಿದು ಬಂದಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಮೂಲಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಶೌಚಾಲಯ, ವಸತಿಗೆ ಪ್ರಥಮಾದ್ಯತೆ ನೀಡಲಾಗುವುದು ಎಂದು ಆಶ್ವಾಸನೆ ನೀಡಿದರು.
ಗ್ರಾಪಂ ಮಾಜಿ ಅಧ್ಯಕ್ಷ ಭಗವಂತಪ್ಪ ಬೈರಿಮಡ್ಡಿ ಗ್ರಾಮದ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು. ದೇವರಗೋನಾಲದ ಮಾಳಿಂಗರಾದ ದೇವಸ್ಥಾನದ ಪೂಜ್ಯರಾದ ಮಾರ್ಥಂಡಪ್ಪ ಪೂಜಾರಿ, ಮುಖಂಡರಾದ ನಿಂಗಣ್ಣ ಚಿಂಚೋಡಿ, ಸೂಲಪ್ಪ ಕಮತಗಿ, ಅಬ್ದುಲ್ ಗಫಾರ್ ನಗನೂರಿ, ರಾಜಾ ವೇಣುಗೋಪಾಲನಾಯಕ, ರಾಜಾ ಹರ್ಷವರ್ಧನ ನಾಯಕ, ಪ್ರಮುಖರಾದ ಬೀರಪ್ಪ ಪೂಜಾರಿ, ನಿಂಗಪ್ಪ ಯಾದವ, ಅಯ್ಯಪ್ಪ ಪ್ಯಾಟಿ, ಈಶ್ವರ ಯಾದವ, ಬಸಪ್ಪ ಹುಂಡೇಕಲ್, ಬಸವರಾಜ ಹುಂಡೇಕಲ್, ಬಸವರಾಜ ಬನ್ನೆಟ್ಟಿ, ಬಲಭೀಮರಾಯ ಬನ್ನೆಟ್ಟಿ, ಭೀಮಣ್ಣ ಬನ್ನೆಟ್ಟಿ ಇದ್ದರು.
ಸನ್ಮಾನ: ಗ್ರಾಮಸ್ಥರು ಶಾಸಕರಿಗೆ ಕಂಬಳಿ ಹೊದಿಸಿ, ಹಳದಿ ರುಮಾಲು ತೊಡಿಸಿ, ಹೂಮಾಲೆ ಹಾಕಿ ಡೊಳ್ಳು ಬಾರಿಸುವ ಮೂಲಕ ಸನ್ಮಾನಿಸಿದರು.